ಕರ್ನಾಟಕ

karnataka

ETV Bharat / bharat

ಸತತವಾಗಿ ಏರಿಕೆಯತ್ತ ಪೆಟ್ರೋಲ್​.. ರಾಜಸ್ಥಾನದಲ್ಲಿ ಲೀಟರ್​ಗೆ 102 ರೂ, ಬೆಂಗಳೂರಿನಲ್ಲಿ!? - ಕೊರೊನಾ ವೈರಸ್ ಹಾವಳಿ

ಕೊರೊನಾ ವೈರಸ್ ಹಾವಳಿ ನಡುವೆ ತೈಲ ಬೆಲೆ ಏರಿಕೆಯಾಗುತ್ತಿದ್ದು, ಇದರಿಂದ ಜನ - ಸಾಮಾನ್ಯರು ಮತ್ತಷ್ಟು ತೊಂದರೆಗೊಳಗಾಗಿದ್ದಾರೆ.

Petrol rate
Petrol rate

By

Published : May 7, 2021, 3:32 PM IST

ನವದೆಹಲಿ:ಪಂಚರಾಜ್ಯ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ದೇಶದಲ್ಲಿ ಮತ್ತೊಮ್ಮೆ ತೈಲ ಬೆಲೆ ಏರಿಕೆಯತ್ತ ಮುಖ ಮಾಡಿದ್ದು, ಸತತ ನಾಲ್ಕನೇ ದಿನವೂ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ರಾಜಸ್ಥಾನದಲ್ಲಿ ಲೀಟರ್​ ಪೆಟ್ರೋಲ್ ಬೆಲೆ 102 ರೂ.ಗೆ ಬಂದು ನಿಂತಿದ್ದು, ಮಧ್ಯಪ್ರದೇಶದಲ್ಲಿ 101.86 ಪೈಸೆ ಹಾಗೂ ಮಹಾರಾಷ್ಟ್ರದಲ್ಲಿ 99.95 ಪೈಸೆ ಆಗಿದೆ.

ಇಂದು ದೇಶದಲ್ಲಿ ಪೆಟ್ರೋಲ್​ ಪ್ರತಿ ಲೀಟರ್​ ಮೇಲೆ 25-28 ಪೈಸೆ ಹಾಗೂ ಡಿಸೇಲ್​ 30-33 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್​ ಪ್ರತಿ ಲೀಟರ್​ 91.27 ಪೈಸೆ ಆಗಿದೆ. ಪಂಚರಾಜ್ಯ ಚುನಾವಣೆ ಘೋಷಣೆಯಾಗುವುದಕ್ಕೂ ಮುಂಚಿತವಾಗಿ ದೇಶದಲ್ಲಿ ತೈಲ ಬೆಲೆ ಏರಿಕೆಯಾಗಿತ್ತು. ಆದರೆ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ತೈಲ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡು ಬಂದಿರಲಿಲ್ಲ. ಇದೀಗ ಮತ್ತೊಮ್ಮೆ ಏರಿಕೆಯತ್ತ ಮುಖ ಮಾಡಿದೆ. ಶ್ರೀನಗರದಲ್ಲಿ ಪೆಟ್ರೋಲ್​ ಬೆಲೆ 105.43 ಪೈಸೆ ಆಗಿತು.

ಯಾವ ನಗರದಲ್ಲಿ ಎಷ್ಟು!?

  • ನವದೆಹಲಿ: ಪೆಟ್ರೋಲ್ 91.27 ರೂ, ಡೀಸೆಲ್ 81.73ರೂ
  • ಬೆಂಗಳೂರು: ಪೆಟ್ರೋಲ್ 94.30ರೂ, ಡೀಸೆಲ್ 86.64 ರೂ
  • ಮುಂಬೈ: ಪೆಟ್ರೋಲ್ 97.61ರೂ,ಡೀಸೆಲ್ 88.82 ರೂ
  • ಚೆನ್ನೈ: ಪೆಟ್ರೋಲ್ 93.15 ರೂ, ಡೀಸೆಲ್ 86.65 ರೂ
  • ಪಾಟ್ನಾ: ಪೆಟ್ರೋಲ್ 93.52 ರೂ, ಡೀಸೆಲ್ 86.94 ರೂ
  • ಕೋಲ್ಕತಾ: ಪೆಟ್ರೋಲ್ 91.41ರೂ, ಡೀಸೆಲ್ 84.57 ರೂ
  • ಹೈದರಾಬಾದ್: ಪೆಟ್ರೋಲ್ 94.86ರೂ, ಡೀಸೆಲ್ 89.11ರೂ
  • ನೋಯ್ಡಾ: ಪೆಟ್ರೋಲ್ 89.44 ರೂ, ಡೀಸೆಲ್ 82.18ರೂ

ABOUT THE AUTHOR

...view details