ನವದೆಹಲಿ:ಪೆಟ್ರೋಲ್ ಹಾಗೂ ಡೀಸೆಲ್ ಇನ್ನಷ್ಟು ದುಬಾರಿಯಾಗಿದ್ದು, ಇಂದು ದೇಶಾದ್ಯಂತ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಜಾಗತಿಕ ತೈಲ ಬೆಲೆಗಳು ಮೂರು ವರ್ಷಗಳ ಗರಿಷ್ಠ ಹಂತ ಮುಟ್ಟಿವೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 25 ಪೈಸೆ ಹೆಚ್ಚಳ ಕಂಡು ಲೀಟರ್ಗೆ 101.89 ರೂಪಾಯಿ ಹಾಗೂ ಡೀಸೆಲ್ ಬೆಲೆಯು 90.17 ರೂ. ಆಗಿದ್ದು, ಇಂದು 30 ಪೈಸೆಯಷ್ಟು ಏರಿಕೆಯಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 107.95 ರೂ.ಗೆ ಸಿಗುತ್ತಿದ್ದು, 24 ಪೈಸೆ ಏರಿಕೆಯಾಗಿದೆ ಮತ್ತು ಡೀಸೆಲ್ ಬೆಲೆ 97.84 ರೂ.ಗಳಾಗಿದ್ದು, 32 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಲೀಟರ್ಗೆ 105.44 ರೂ. ಹಾಗೂ ಡೀಸೆಲ್ 95.70 ರೂಪಾಯಿ ಇದೆ.
ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಏರಿಕೆ ಕಂಡು, 99.58 ರೂ. ತಲುಪಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 94.74 ರೂ. ಇದ್ದು, 29 ಪೈಸೆ ಹೆಚ್ಚಳವಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ದರ ಹೀಗಿದೆ:
ಬೆಂಗಳೂರು:
ಪೆಟ್ರೋಲ್ - ಪ್ರತಿ ಲೀಟರ್ಗೆ 105.44 ರೂ.
ಡೀಸೆಲ್ - ಪ್ರತಿ ಲೀಟರ್ಗೆ 95.70 ರೂ.
ಮುಂಬೈ:
ಪೆಟ್ರೋಲ್ - ಪ್ರತಿ ಲೀಟರ್ಗೆ 107.95 ರೂ.
ಡೀಸೆಲ್ - ಪ್ರತಿ ಲೀಟರ್ಗೆ 97.84 ರೂ.