ಕರ್ನಾಟಕ

karnataka

ETV Bharat / bharat

ತೈಲ ಏರಿಕೆ ನಾಗಾಲೋಟ: ಪೆಟ್ರೋಲ್​, ಡಿಸೇಲ್​ ಬೆಲೆಯಲ್ಲಿ ಮತ್ತೆ ಏರಿಕೆ - ತೈಲ ಬೆಲೆ ಏರಿಕೆ

ಕಳೆದ ಕೆಲ ದಿನಗಳಿಂದ ಪೆಟ್ರೋಲ್​-ಡಿಸೇಲ್​ ಬೆಲೆಯಲ್ಲಿ ನಿತ್ಯ ಏರಿಕೆ ಕಂಡು ಬರುತ್ತಿದ್ದು, ಇಂದು ಕೂಡ ಮತ್ತಷ್ಟು ಏರಿಕೆಯಾಗಿದೆ.

Petrol rate
Petrol rate

By

Published : May 15, 2021, 4:01 PM IST

ಹೈದರಾಬಾದ್​:ಮಹಾಮಾರಿ ಕೊರೊನಾ ವೈರಸ್ ಹಾವಳಿ ನಡುವೆ ದೇಶದಲ್ಲಿ ತೈಲ ಬೆಲೆಯಲ್ಲಿ ನಿತ್ಯ ಏರಿಕೆ ಕಂಡು ಬರುತ್ತಿದ್ದು, ಇದರಿಂದ ಜನಸಾಮಾನ್ಯರು ಮತ್ತಷ್ಟು ತೊಂದರೆಗೊಳಗಾಗುವಂತೆ ಆಗಿದೆ.

ಇಂದು ಕೂಡ ಪೆಟ್ರೋಲ್ ಪ್ರತಿ ಲೀಟರ್​ಗೆ 29 ಪೈಸೆ ಹಾಗೂ ಡಿಸೇಲ್​ ಪ್ರತಿ ಲೀಟರ್​ಗೆ 34 ಪೈಸೆ ಏರಿಕೆ ಕಂಡಿದ್ದು, ಕೆಲವೊಂದು ರಾಜ್ಯಗಳಲ್ಲಿ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ರೋವರ್ ಇಳಿಸಿದ ಚೀನಾ

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್​​ 92.34 ಆಗಿದ್ದು, ಡಿಸೇಲ್​​ 82.95 ಪೈಸೆ ಆಗಿದೆ. ಪ್ರಮುಖವಾಗಿ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಈಗಾಗಲೇ ಪೆಟ್ರೋಲ್​ 100ರ ಗಡಿ ದಾಟಿದೆ. ಮುಂಬೈನಲ್ಲಿ ಪೆಟ್ರೋಲ್​ 98.65 ರೂ. ಡಿಸೇಲ್​​ 90.11 ರೂ ಆಗಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್​ ಪ್ರತಿ ಲೀಟರ್​ಗೆ 103.27 ಪೈಸೆ ಆಗಿದೆ.

ABOUT THE AUTHOR

...view details