ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರುತ್ತಲೇ ದ್ದು, ತೈಲ ಬೆಲೆಗಳು ಹಳೆ ದಾಖಲೆಗಳನ್ನು ಮುರಿಯುತ್ತಿವೆ. ದೆಹಲಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ 25 ಪೈಸೆ ಹೆಚ್ಚಾಗಿದೆ.
25 ಪೈಸೆ ಹೆಚ್ಚಳದಿಂದ ಪೆಟ್ರೋಲ್ ಪ್ರತಿ ಲೀಟರ್‌ಗೆ ಬೆಲೆ 89.54 ರೂ. ಆಗಿದೆ. ಇದೇ ವೇಳೆ ಡೀಸೆಲ್ ಬೆಲೆ 25 ಪೈಸೆ ಹೆಚ್ಚಳದಿಂದ ಪ್ರತಿ ಲೀಟರ್‌ಗೆ 79.95 ರೂಪಾಯಿಗಳಿಗೆ ಏರಿದೆ. ಹೀಗಾಗಿ ಸಾಮಾನ್ಯ ಜನರು ಸಹ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ದಿನದಿಂದ ದಿನಕ್ಕೆ ಇಂಧನ ದರ ಹೆಚ್ಚುತ್ತಿರುವ ಹಿನ್ನೆಲೆ ಜನಸಾಮಾನ್ಯರಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದ್ದು, ಪ್ರತಿಪಕ್ಷಗಳು ಸಹ ಕೇಂದ್ರದ ಬೆಲೆ ಏರಿಕೆ ನೀತಿಯನ್ನು ಖಂಡಿಸುತ್ತಿವೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ಏರಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಈಗಾಗಲೇ ಸುಂಕ ಕಡಿತಗೊಳಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:ಪುರಿ ಜಗನ್ನಾಥನಿಗೆ 4.8 ಚಿನ್ನ, 3.8 ಬೆಳ್ಳಿ ಸೇರಿ 8 ಕೆಜಿಗೂ ಹೆಚ್ಚು ಒಡವೆ ದಾನ ಮಾಡಿದ ಭಕ್ತ!