ಮುಂಬೈ: ಒಂದು ದಿನದ ವಿರಾಮದ ಬಳಿಕ ಇಂದು ಇಂಧನ ದರ ಮತ್ತೆ ಏರಿಕೆ ಕಂಡಿದ್ದು, ಗ್ರಾಹಕನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 25 ರಿಂದ 30 ಪೈಸೆ ಹಾಗೂ ಡೀಸೆಲ್ ಮೇಲೆ 28 ರಿಂದ 32 ಪೈಸೆ ಹೆಚ್ಚಳವಾಗಿದೆ.
ನಿನ್ನೆ ಒಂದು ದಿನ ಮಾತ್ರ ಇಂಧನ ದರ ಮೊನ್ನೆಯಷ್ಟೇ ಸ್ಥಿರವಾಗಿತ್ತು. ಆದರೆ, ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 25 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 101.64 ರೂ. ಹಾಗೂ 30 ಪೈಸೆ ಹೆಚ್ಚಳದೊಂದಿಗೆ ಡೀಸೆಲ್ ದರ 89.87 ರೂ.ಗೆ ಏರಿಕೆಯಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 26 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ಬೆಲೆ 105.18ಕ್ಕೆ ಹಾಗೂ 32 ಪೈಸೆ ಹೆಚ್ಚಳದೊಂದಿಗೆ ಡೀಸೆಲ್ ದರ 95.38 ರೂ.ಗೆ ಏರಿಕೆಯಾಗಿದೆ.