ಕರ್ನಾಟಕ

karnataka

ETV Bharat / bharat

ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ: ಇಂದೂ ಸಹ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 35-35 ಪೈಸೆಯಷ್ಟು ಹೆಚ್ಚಿಸಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಜನರು ಅಸಮಾಧಾನಗೊಂಡಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

petrol
petrol

By

Published : Oct 14, 2021, 10:33 AM IST

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕಳೆದ ಎರಡು ದಿನಗಳ ನಂತರ ಮತ್ತೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್​​ ಹಾಗೂ ಡೀಸೆಲ್​ ಮೇಲೆ 35 ಪೈಸೆಯಷ್ಟು ಹೆಚ್ಚಿಸಿವೆ.

ಕಳೆದ ಮಂಗಳವಾರ ಮತ್ತು ಬುಧವಾರ ಪೆಟ್ರೋಲಿಯಂ ಉತ್ಪನ್ನಗಳ ದರ ಸ್ಥಿರವಾಗಿತ್ತು. ಆದರೆ ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 35-35 ಪೈಸೆ ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 104.79 ರೂಪಾಯಿ ಹಾಗೂ 35 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 93.54 ರೂಪಾಯಿ ಇದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್​ಗೆ 110.75 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.40 ರೂಪಾಯಿಗೆ ಏರಿಕೆಯಾಗಿದೆ. ಪಾಟ್ನಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 108.04 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 100.07 ಇದೆ. ಡೀಸೆಲ್ ಬೆಲೆ ಸಹ ನೂರರ ಗಡಿ ದಾಟಿದ್ದು, ಗ್ರಾಹಕರಿಗೆ ತೈಲ ದರ ಏರಿಕೆ ಶಾಕ್​ ನೀಡಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 108.44 ರೂಪಾಯಿ ಇದ್ದು ಡೀಸೆಲ್‌ 99.26 ರೂಪಾಯಿ ನಿಗದಿಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 105.43 ರೂ. ಗಳಾಗಿದ್ದು, ಡೀಸೆಲ್ 96.63 ರೂ. ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್​ಗೆ ಪೆಟ್ರೋಲ್​ಗೆ 102.10 ರೂ. ಇದ್ದು, ಲೀಟರ್ ಡೀಸೆಲ್ 97.93 ಕ್ಕೆ ಲಭ್ಯವಿದೆ.

ಪ್ರಮುಖ ನಗರಗಳು ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ
ನವದೆಹಲಿ ₹104.79 ₹93.54
ಮುಂಬೈ ₹110.75 ₹101.40
ಕೋಲ್ಕತ್ತಾ ₹105.43 ₹96.63
ಚೆನ್ನೈ ₹102.10 ₹97.93
ಬೆಂಗಳೂರು ₹108.44 ₹99.26
ಭೋಪಾಲ್ ₹117.52 ₹113.37
ಲಖನೌ ₹101.81 ₹93.96
ಪಾಟ್ನಾ ₹108.04 ₹100.07
ಚಂಡಿಗಢ್​ ₹100.86
₹93.34

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಪೆಟ್ರೋಲ್​ ಬೆಲೆ ಶತಕದ ಗಡಿ ದಾಟಿದ್ದು, ಮುಂಬೈ ಮತ್ತು ಪಾಟ್ನಾದಲ್ಲಿ ಡೀಸೆಲ್​ ಬೆಲೆ ಸಹ ನೂರರ ಗಡಿ ದಾಟಿದೆ.

ABOUT THE AUTHOR

...view details