ಕರ್ನಾಟಕ

karnataka

ETV Bharat / bharat

ದೇಶಾದ್ಯಂತ ತೈಲ ದರ ಯಥಾಸ್ಥಿತಿ: ಬೆಂಗಳೂರಲ್ಲಿ ಎಷ್ಟಿದೆ ಇಂಧನ ಬೆಲೆ..? - ಬೆಂಗಳೂರು ತೈಲ ದರ

ದೇಶದಾದ್ಯಂತ ತೈಲ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ಸತತ 7 ದಿನಗಳಿಂದ ಏರಿಕೆಯಾಗುತ್ತಿದ್ದ ದರ ಇಂದು ಯಥಾಸ್ಥಿತಿಯಲ್ಲಿದೆ..

petrol-and-diesel-price-in-india
ದೇಶಾದ್ಯಂತ ತೈಲ ದರ ಯಥಾಸ್ಥಿತಿ: ಬೆಂಗಳೂರಲ್ಲಿ ಎಷ್ಟಿದೆ ತೈಲ ದರ..?

By

Published : Nov 3, 2021, 10:31 AM IST

ನವದೆಹಲಿ: ದೇಶಾದ್ಯಂತ ತೈಲ ದರದಲ್ಲಿ ಇಂದು ಸ್ಥಿರತೆ ಕಂಡು ಬಂದಿದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಸೇರಿ ಬೆಂಗಳೂರಿನಲ್ಲೂ ಸಹ ಬೆಲೆ ಯಥಾಸ್ಥಿತಿಯಲ್ಲಿದ್ದು, ಯಾವುದೇ ಬದಲಾವಣೆ ಕಂಡು ಬಂದಿಲ್ಲ.

ನಿನ್ನೆ ಪೆಟ್ರೋಲ್ ಬೆಲೆಯಲ್ಲಿ 35 ಪೈಸೆ ಏರಿಕೆಯಾಗಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 110.04 ರೂಪಾಯಿಗೆ ತಲುಪಿತ್ತು ಹಾಗೂ ಪ್ರತಿ ಲೀಟರ್ ಪೆಟ್ರೋಲ್ 98.42 ರೂಪಾಯಿಗೆ ತಲುಪಿತ್ತು.

ಕಳೆದ 7 ದಿನಗಳಿಂದ ತೈಲ ಬೆಲೆ ಏರಿಕೆ ಎಗ್ಗಿಲ್ಲದೆ ಹೆಚ್ಚಳವಾಗುತ್ತಿತ್ತು. ಪ್ರತಿ ಲೀಟರ್​ಗೆ 35 ಪೈಸೆ ಏರಿಕೆಯಾಗುತ್ತಾ ಸಾಗಿತ್ತು. ಆದರೆ, ಇಂದು ಪ್ರಮುಖ ನರದಲ್ಲಿ ದರ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ.

ದೇಶಾದ್ಯಂತ ತೈಲ ದರ

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 113.93ಕ್ಕೆ ತಲುಪಿದೆ. ಪ್ರತಿ ಲೀಟರ್ ಡೀಸೆಲ್ ದರ 104.50 ರೂ. ಗೆ ಏರಿಕೆಯಾಗಿದೆ. ಗಾಂಧಿನಗರದಲ್ಲಿ ಲೀಟರ್‌ ಪೆಟ್ರೋಲ್​ ಬೆಲೆ 106.94 ರೂ. ಇದೆ. ಹಾಗೆಯೇ ಪ್ರತಿ ಲೀಟರ್‌ ಡೀಸೆಲ್ 106.39 ರೂ.ಗಳಿಗೆ ದೊರೆಯುತ್ತಿದೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ.

ABOUT THE AUTHOR

...view details