ದೇಶದಲ್ಲಿ ತೈಲ ಬೆಲೆ ಸ್ಥಿರ: ಮುಂದಿನ ದಿನಗಳಲ್ಲಿ ಪೆಟ್ರೋಲ್ ದರ ಇಳಿಕೆ ಸಾಧ್ಯತೆ! - ಪೆಟ್ರೋಲ್ ಬೆಲೆ
ಕಳೆದ 5 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 101.84 ರೂ.ಇದ್ದು, ಡೀಸೆಲ್ ಬೆಲೆ 89.87 ರೂ. ಆಗಿದೆ.
ತೈಲ ಬೆಲೆ
By
Published : Jul 22, 2021, 1:22 PM IST
ನವದೆಹಲಿ: ಕಳೆದ 5 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದ್ದು, ಸಮಾಧಾನಕರ ಸಂಗತಿಯಾಗಿದೆ. ಇಂದೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 101.84 ರೂ.ಇದ್ದು, ಡೀಸೆಲ್ ಬೆಲೆ 89.87 ರೂ. ಆಗಿದೆ.
ಇಂದಿನ ತೈಲ ಬೆಲೆ:
ನಗರ
ಪೆಟ್ರೋಲ್
ಡೀಸೆಲ್
ಮುಂಬೈ
107.83
97.45
ಕೊಲ್ಕತ್ತಾ
102.08
93.02
ಚೆನ್ನೈ
102.49
94.39
ಬೆಂಗಳೂರು
105.25
95.26
ಲಖನೌ
98.69
90.26
ಪಾಟ್ನಾ
104.57
95.81
ಜೈಪುರ
108.71
99.02
ಗುರುಗ್ರಾಂ
99.46
90.47
ಹೈದರಾಬಾದ್
105.52
97.96
ಪೆಟ್ರೋಲ್ ಬೆಲೆ ಇಳಿಕೆ ನಿರೀಕ್ಷೆ:
ಕೆಲವು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ತೈಲ ಬೆಲೆ ಏರಿಕೆಯನ್ನು ಎದುರಿಸುತ್ತಿರುವ ಗ್ರಾಹಕರು, ತೈಲ ಕಂಪನಿಗಳು ಜಾಗತಿಕ ತೈಲ ಬೆಲೆಗಳ ಕುಸಿತವನ್ನು ಮೌಲ್ಯಮಾಪನ ಮಾಡಲು ಪ್ರಾರಂಭಿಸಿದೆ. ಇದರಿಂದ ಮುಂದಿನ ಕೆಲವು ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳ ಕೊನೆಯಲ್ಲಿ ಬ್ಯಾರೆಲ್‌ಗೆ 77 ಡಾಲರ್ ಏರಿದ್ದ ಬೆಂಚ್‌ಮಾರ್ಕ್ ಬ್ರೆಂಟ್ ಕಚ್ಚಾ, ಕಳೆದ ಹದಿನೈದು ದಿನಗಳಲ್ಲಿ ಶೇಕಡಾ 10 ಕ್ಕಿಂತಲೂ ಹೆಚ್ಚು ಕುಸಿದು ಬ್ಯಾರೆಲ್‌ಗೆ 68.85 ಡಾಲರ್‌ಗೆ ತಲುಪಿದೆ. ಇನ್ನೂ ಕೆಲವು ದಿನಗಳವರೆಗೆ ಬೆಲೆ ರೇಖೆಯು ಪ್ರತಿ ಬ್ಯಾರೆಲ್‌ಗೆ ಡಾಲರ್ 70 ಕ್ಕಿಂತ ಕಡಿಮೆಯಿದ್ದರೆ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಡಿತವಾಗಬಹುದು.