ಕರ್ನಾಟಕ

karnataka

ETV Bharat / bharat

ಸಾಕು ನಾಯಿಯಿಂದ 1.50 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿ! - A man lost 1.50 lakh money from a his pet dog

ಮನೆಯಲ್ಲಿದ್ದ ಹಣದ ಚೀಲವನ್ನು ಸಾಕು ನಾಯಿಯೊಂದು ಕಚ್ಚಿಕೊಂಡು ಹೋಗಿ ಬಿಸಾಡಿದೆ. ಇದರಿಂದ ಆಂಧ್ರಪ್ರದೇಶದ ವಾರಂಗಲ್​ ನಿವಾಸಿಯೊಬ್ಬ 1.50 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

pet-dog
ಸಾಕು ನಾಯಿ

By

Published : Apr 28, 2022, 5:33 PM IST

ವಾರಂಗಲ್(ಆಂಧ್ರಪ್ರದೇಶ):ಸಾಕು ನಾಯಿಗಳು ತನ್ನ ಮಾಲೀಕನ ಆಣತಿಯಂತೆಯೇ ನಡೆದುಕೊಳ್ಳುತ್ತವೆ. ಎಲ್ಲಾದರೂ ವಸ್ತುವನ್ನು ಬಿಟ್ಟು ಹೋದರೆ, ಅದನ್ನು ನಾಯಿ ಮಾಲೀಕನಿಗೆ ಹಿಂದಿರುಗಿಸಿದ ನಿದರ್ಶನಗಳಿವೆ. ಆದರೆ, ಆಂಧ್ರಪ್ರದೇಶದ ನಾಯಿಯೊಂದು 1.50 ಲಕ್ಷ ಹಣದ ಚೀಲವನ್ನು ಮಾಲೀಕನ ಕಣ್ತಪ್ಪಿಸಿ ಬಿಸಾಡಿ ಬಂದ ಘಟನೆ ಬೆಳಕಿಗೆ ಬಂದಿದೆ.

ವಾರಂಗಲ್ ಜಿಲ್ಲೆಯ ನಾಚಿನಪಲ್ಲಿ ಗ್ರಾಮದ ಕಾಸು ಚೇರಾಲು ಎಂಬುವವರು ಹಣ ಕಳೆದುಕೊಂಡವರು. ತಾನು ಸಂಪಾದಿಸಿದ ಹಣವನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದ ಕಾಸು ಚೇರಾಲು ಎಂಬವರು, ಸ್ನಾನಕ್ಕೆ ಹೋದಾಗ ಹಣದ ಚೀಲವನ್ನು ಟೇಬಲ್​ ಮೇಲಿಟ್ಟಿದ್ದಾರೆ. ಈ ವೇಳೆ ಸಾಕು ನಾಯಿ ಅದನ್ನು ತೆಗೆದುಕೊಂಡು ಎಲ್ಲಿಯೋ ಬಿಸಾಡಿ ಬಂದಿದೆ. ಸ್ನಾನದ ಬಳಿಕ ಕಾಸು ಚೇರಾಲು ಅವರು ಹಣಕ್ಕಾಗಿ ತಡಕಾಡಿದಾಗ ಚೀಲ ಕಾಣೆಯಾಗಿದ್ದು ಗೊತ್ತಾಗಿದೆ. ಈ ವೇಳೆ ನಾಯಿಯೂ ಮನೆಯಿಂದ ಕಂಡು ಹೊರಬಂದು ಹುಡುಕಾಡಿದ್ದಾರೆ. ಈ ವೇಳೆ ನಾಯಿ ಮನೆಗೆ ಬಂದಿದೆ. ಆದರೆ, ಹಣದ ಚೀಲವಿರಲಿಲ್ಲ.

ಬಳಿಕ ಸುತ್ತಲೂ ಹುಡುಕಾಡಿದರೂ ಹಣದ ಚೀಲ ಸಿಗದ ಕಾರಣ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಸಂದೇಶವನ್ನು ಹರಿಬಿಟ್ಟು, ಯಾರಿಗಾದರೂ ತನ್ನ ಹಣದ ಬ್ಯಾಗ್ ಸಿಕ್ಕರೆ ಅದನ್ನು ತನಗೆ ಹಿಂತಿರುಗಿಸುವಂತೆ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ:ರಜೆ ತೆಗೆದುಕೊಳ್ಳದೇ ಲಂಡನ್​ ಪ್ರವಾಸ; ಐಪಿಎಸ್ ಮಹಿಳಾ​ ಅಧಿಕಾರಿ ಅಮಾನತು

ABOUT THE AUTHOR

...view details