ಕರ್ನಾಟಕ

karnataka

ETV Bharat / bharat

ಶಾಲೆಗೆ ಹೋಗ್ತಿದ್ದಾಗ ಲಿಫ್ಟ್​ನಲ್ಲಿ ಬಾಲಕನ ಕೈ ಕಚ್ಚಿದ ನಾಯಿ: ವಿಡಿಯೋ

ಗ್ರೇಟರ್​​ ನೊಯ್ಡಾದಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕನ ಮೇಲೆ ನಾಯಿ ದಾಳಿ ಮಾಡಿ ಕಚ್ಚಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

pet-dog-bite-innocent-child-in-greater-noida
ಶಾಲೆಗೆ ಹೋಗ್ತಿದ್ದಾಗ ಲಿಫ್ಟ್​ನಲ್ಲಿ ಬಾಲಕನ ಕೈ ಕಚ್ಚಿದ ನಾಯಿ

By

Published : Nov 16, 2022, 7:21 PM IST

ನವದೆಹಲಿ/ನೋಯ್ಡಾ:ಸಾಕು ನಾಯಿಗಳ ಬಗ್ಗೆ ಎಚ್ಚರಿಕೆ ವಹಿಸಲು ಸರ್ಕಾರ, ಕೋರ್ಟ್​ ಸೂಚಿಸಿದಾಗ್ಯೂ ಅವುಗಳಿಂದಾಗುವ ದಾಳಿ ಮಾತ್ರ ನಿಂತಿಲ್ಲ. ಗ್ರೇಟರ್​ ನೋಯ್ಡಾದಲ್ಲಿ ಶಾಲೆಗೆಂದು ಬಾಲಕ ಲಿಫ್ಟ್​ನಲ್ಲಿ ಹೋಗುತ್ತಿದ್ದಾಗ ನಾಯಿ ದಾಳಿ ಮಾಡಿ ಕೈ ಕಚ್ಚಿದ್ದು, ನಾಲ್ಕು ಹೊಲಿಗೆ ಹಾಕಲಾಗಿದೆ. ಶ್ವಾನ ದಾಳಿ ಮಾಡಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಾಲಕ ತನ್ನ ತಾಯಿಯ ಜೊತೆಗೆ ಲಿಫ್ಟ್​ನಲ್ಲಿ ಹೋಗುತ್ತಿದ್ದಾಗ ಅದೇ ವೇಳೆಗೆ ನಾಯಿ ಸಮೇತ ವ್ಯಕ್ತಿಯೊಬ್ಬರು ಒಳಗೆ ಬಂದಿದ್ದಾರೆ. ಮಗುವನ್ನು ಕಂಡ ನಾಯಿ ಏಕಾಏಕಿ ಕೈಗೆ ಬಾಯಿ ಹಾಕಿ ಕಚ್ಚಿದೆ. ತಕ್ಷಣವೇ ನಾಯಿಯನ್ನು ಮಾಲೀಕ ಎಳೆದುಕೊಂಡಿದ್ದಾನೆ. ನಾಯಿಯ ಕೋರೆಹಲ್ಲುಗಳು ಅದಾಗಲೇ ಮಗುವಿನ ಕೈ ಹೊಕ್ಕಿ ಗಾಯ ಮಾಡಿದ್ದವು.

ಮಗು ಭಯದಿಂದ ತಾಯಿ ಹತ್ತಿರ ಓಡಿ ಬಂದಿದೆ. ಪರಿಶೀಲಿಸಿದಾಗ ಕಚ್ಚಿದ್ದು ಗೊತ್ತಾಗಿದೆ. ಬಳಿಕ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ನಾಲ್ಕು ಹೊಲಿಗೆಗಳು ಬಿದ್ದಿವೆ. ಈ ಬಗ್ಗೆ ಬಾಲಕನ ಕುಟುಂಬಸ್ಥರು ದೂರು ನೀಡಿಲ್ಲ.

ಶಾಲೆಗೆ ಹೋಗ್ತಿದ್ದಾಗ ಲಿಫ್ಟ್​ನಲ್ಲಿ ಬಾಲಕನ ಕೈ ಕಚ್ಚಿದ ನಾಯಿ

ಸಾಮಾಜಿಕ ಜಾಲತಾಣದಲ್ಲಿ ನಾಯಿ ದಾಳಿಯ ವಿಡಿಯೋ ವೈರಲ್​ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಮಕ್ಕಳು ಇದ್ದ ವೇಳೆ ನಾಯಿಗಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಮಗುವಿನ ಹೊಟ್ಟೆಗೆ, ಜೊಮ್ಯಾಟೊ ಡೆಲಿವರಿ ಬಾಯ್​ ಗುಪ್ತಾಂಗಕ್ಕೆ ಶ್ವಾನ ಕಚ್ಚಿದ ಪ್ರಕರಣಗಳು ದಾಖಲಾಗಿದ್ದವು.

ಓದಿ:ಮಹಿಳೆಯನ್ನು ಲೈಂಗಿಕತೆಗೆ ಪೀಡಿಸಿದ ಆರೋಪ: ಒಪ್ಪದ್ದಕ್ಕೆ ವ್ಯಕ್ತಿಯಿಂದ ಕೊಲೆ

ABOUT THE AUTHOR

...view details