ಕರ್ನಾಟಕ

karnataka

ETV Bharat / bharat

ಸರ್ಕಾರಿ ಕಚೇರಿಯಲ್ಲಿದ್ದಾಗ ಅಧಿಕಾರಿಗಳು ವೈಯಕ್ತಿಕ ಕೆಲಸಕ್ಕೆ ಮೊಬೈಲ್​ ಬಳಕೆ ತಪ್ಪು: ಮದ್ರಾಸ್ ಹೈಕೋರ್ಟ್​ - ಮೊಬೈಲ್ ಬಳಸುವ ಸರ್ಕಾರಿ ನೌಕರರಿಗೆ ಎಚ್ಚರಿಕೆ

Madras HC on mobile using: ಮೊಬೈಲ್ ಬಳಸಿದ್ದಕ್ಕೆ ಅಮಾನತುಗೊಂಡಿದ್ದ ತಮಿಳುನಾಡು ಸರ್ಕಾರಿ ನೌಕರನ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಸರ್ಕಾರಿ ಅಧಿಕಾರಿಗಳು ಕಚೇರಿಯಲ್ಲಿದ್ದಾಗ ವೈಯಕ್ತಿಕ ಕೆಲಸಕ್ಕೆ ಮೊಬೈಲ್​ ಬಳಕೆ ತಪ್ಪು ಎಂದು ಸೂಚನೆ ನೀಡಿದೆ.

Personal use of mobile phone by Govt staff not be allowed during office hours: Madras HC to TN govt
ಸರ್ಕಾರಿ ಅಧಿಕಾರಿಗಳು ಕಚೇರಿಯಲ್ಲಿದ್ದಾಗ ವೈಯಕ್ತಿಕ ಕೆಲಸಕ್ಕೆ ಮೊಬೈಲ್​ ಬಳಕೆ ತಪ್ಪು: ಮದ್ರಾಸ್ ಹೈಕೋರ್ಟ್​

By

Published : Mar 15, 2022, 3:22 PM IST

ಮಧುರೈ,ತಮಿಳುನಾಡು: ಸರ್ಕಾರಿ ನೌಕರರು ಕಚೇರಿ ಸಮಯದಲ್ಲಿ ವೈಯಕ್ತಿಕ ಕೆಲಸಕ್ಕಾಗಿ ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿ ನೀಡಬಾರದು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ತಮಿಳುನಾಡು ಸರ್ಕಾರ ಮಂಗಳವಾರ ನಿರ್ದೇಶನ ನೀಡಿದೆ.

ತಮಿಳುನಾಡು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಕೆಲಸದ ಸ್ಥಳದಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಅಮಾನತುಗೊಂಡಿದ್ದು, ಈ ಆದೇಶವನ್ನು ಪ್ರಶ್ನಿಸಿ ಮಧುರೈ ಹೈಕೋರ್ಟ್​ನ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ಎಂ ಸುಬ್ರಮಣ್ಯಂ ವಿಚಾರಣೆ ನಡೆಸಿದರು.

ಈ ವೇಳೆ ಸರ್ಕಾರಿ ನೌಕರರು ಕೆಲಸದ ಸಮಯದಲ್ಲಿ ತಮ್ಮ ವೈಯಕ್ತಿಕ ಬಳಕೆಗಾಗಿ ಮೊಬೈಲ್ ಫೋನ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆದರೆ ಇದು ಉತ್ತಮ ಅಭ್ಯಾಸವಲ್ಲ ಎಂದು ಹೇಳಿದ್ದು, ಈ ಸಂಬಂಧ ನಿಯಮಗಳನ್ನು ರೂಪಿಸಿ, ತಪ್ಪಿತಸ್ಥ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ನಾಲ್ಕು ವಾರಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆಯೂ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್​ ನಿರ್ದೇಶನ ನೀಡಿದೆ.

ಇದನ್ನೂ ಓದಿ:ಶಾಲೆಯಲ್ಲಿ ಡ್ರೆಸ್​​ ಕೋಡ್​ ಅನುಸರಿಸಬೇಕು.. ಹಿಜಾಬ್​ ತೀರ್ಪಿನ ಬಗ್ಗೆ ಹೇಮಾ ಮಾಲಿನಿ

ABOUT THE AUTHOR

...view details