ಮಹಾರಾಷ್ಟ್ರ :ವಿಧವೆ ಶಿಕ್ಷಕಿ ಬ್ಲ್ಯಾಕ್ಮೇಲ್ಗೆ ಬೇಸತ್ತ ವಿವಾಹಿತ ಪ್ರಭುದಾಸ್ ಬೋಲೆ ಎಂಬಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಈ ಘಟನೆ ಮೇ 16 ರಂದು ಮಹಾರಾಷ್ಟ್ರದ ಖಮ್‌ಗಾಂವ್ ತಾಲೂಕಿನ ಪಹುರ್ಜಿರಾದಲ್ಲಿ ನಡೆದಿದೆ. ಮೃತನ ಹೆಂಡತಿ ವರ್ಷಾ ತನ್ನ ಗಂಡನ ಸಾವಿಗೆ ಶಿಕ್ಷಕಿ ಕಾರಣ ಎಂದು ಜಲಂಬ್ ಪೊಲೀಸರು ಪ್ರಕರಣ ದಾಖಲಿಸಿದ್ದು,ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಮೃತ ಪ್ರಭುದಾಸ್ ಹಾಗೂ ಇತ್ತ ಗಂಡನನ್ನು ಕಳೆದುಕೊಂಡಿದ್ದ ಶಿಕ್ಷಕಿ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಫೋನ್ ಸಂಭಾಷಣೆ, ಸಂದೇಶ ಕಾಮನ್ ಆಗಿತ್ತು. ಈ ವೇಳೆ ಶಿಕ್ಷಕಿ ತನ್ನ ಕೆಲಸ ಕಳೆದಕೊಂಡಿದ್ದಾಳೆ.
ಮುಂದೆ ಏನು ಮಾಡಬೇಕು ಎಂದು ದಾರಿ ತೋಚದಾಗಿದೆ. ಉಪಾಯ ಮಾಡಿ ತನ್ನ ಸಂಪರ್ಕದಲ್ಲಿದ್ದ ಪ್ರಭುದಾಸ್ ಬೋಲೆ ಹಣ ಪಡೆಯಲು ಯತ್ನಿಸಿದ್ದಾಳೆ. ನಾನು ಮನೆ ತಗೋಬೇಕು, ನನಗೆ ಹಣ ಕೊಡು ಎಂದು ಕೇಳಿದ್ದಾಳೆ.
ಇದಕ್ಕೆ ಪ್ರಭುದಾಸ್ ಬೋಲೆ ನನ್ನ ಬಳಿ ಹಣ ಇಲ್ಲ ಎಂದಿದ್ದಾನೆ. ಇದರಿಂದ ಕುಪಿತಗೊಂಡ ಶಿಕ್ಷಕಿ ನನ್ನ ಬಳಿ ನಿನ್ನ ಫೋಟೋ, ಖಾಸಗಿ ವಿಡಿಯೋ ಇದೆ. ಹಣ ನೀಡದಿದ್ದರೆ ಅವುಗಳನ್ನು ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಸಿದ್ದಾಳೆ.
ಇದರಿಂದ ಬೇಸತ್ತ ಪ್ರಭುದಾಸ್ ಬೋಲೆ ಶಿಕ್ಷಕಿಗೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಂದೇಶ ಕಳುಹಿಸಿ ವಿಷ ಸೇವಿಸಿ ಜೀವ ಕಳೆದುಕೊಂಡಿದ್ದಾನೆ. ಪ್ರಕರಣದಲ್ಲಿ ಶಿಕ್ಷಕಿಗೆ ಹಲವರು ಸಾಥ್ ನೀಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ.
ಹೆಂಡತಿ ಇದ್ರೂ ಪರಸ್ತ್ರೀ ಸಹವಾಸ ಮಾಡಿ ಈಗ ವ್ಯಕ್ತಿ ಮಸಣ ಸೇರಿದ್ದಾನೆ. ಹಣದ ಆಸೆಗೆ ಬ್ಲ್ಯಾಕ್ ಮೇಲ್ ಮಾಡಿ ವ್ಯಕ್ತಿ ಜೀವಕ್ಕೆ ಕುತ್ತು ತಂದ ವಿಧವೆ ಶಿಕ್ಷಕಿ ಜೈಲು ಕಂಬಿ ಎಣಿಸುವಂತಾಗಿದೆ.