ಅಮರಾವತಿ:ದೇಶದ ವಿವಿಧೆಡೆಭಾರೀ ಮಳೆಯಾಗುತ್ತಿದೆ. ಇದರಿಂದ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆಗಳ ಮೇಲೆಯೇ ನೀರು ಹರಿಯುತ್ತಿದೆ. ಮಹಾರಾಷ್ಟ್ರದ ಬೆಂಬ್ಲಾ ನದಿ ಸೇತುವೆ ನೀರಿನಿಂದ ಜಲಾವೃತವಾಗಿದ್ದು, ಇದರ ನಡುವೆಯೇ ಹೋದ ಟ್ರ್ಯಾಕ್ಟರ್‌ವೊಂದು ಕೊಚ್ಚಿ ಹೋಗಿದ್ದು, ಅದರಲ್ಲಿದ್ದ ಐವರಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಇಬ್ಬರು ಬದುಕುಳಿದ ಘಟನೆ ನಡೆದಿದೆ.
ಭಾರೀ ಮಳೆಯಿಂದಾಗಿ ಅಣೆಕಟ್ಟೆಗಳಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಬೆಂಬ್ಲಾ ನದಿಯೂ ಭಾರಿ ಪ್ರಮಾಣದಲ್ಲಿ ಹರಿಯುತ್ತಿದೆ. ನಂದಗಾಂವ್ ಖಂಡೇಶ್ವರ ತಾಲೂಕಿನಲ್ಲಿ ಅಡ್ಡಲಾಗಿರುವ ಸೇತುವೆ ಮುಳುಗಿದೆ. ನಂದಗಾಂವ್‌ನಿಂದ ಜವ್ರಾ ಮೋಳ್ವನಕ್ಕೆ ಹೊರಟಿದ್ದ ಟ್ರ್ಯಾಕ್ಟರ್‌ವೊಂದು ಪ್ರವಾಹದ ನೀರಿನಲ್ಲಿಯೇ ಸೇತುವೆ ದಾಟುವಾಗ ತಡೆಗೋಡೆಗಳಿರದ ಕಾರಣ ತಪ್ಪಿ ನದಿಗೆ ಉರುಳಿದೆ.