ನೋಯ್ಡಾ: ನೋಯ್ಡಾದ ಸೂಪರ್ ಟೆಕ್ ಕಂಪನಿಯು 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅವಳಿ ಕಟ್ಟಡಗಳ ಧ್ವಂಸಗೊಳಿಸಲು ಕ್ಷಣಗಣನೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮಧ್ಯರಾತ್ರಿ ಇಲ್ಲಿನ ಕೆಲ ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಡಿಯೋ ಮಾಡಿಕೊಂಡರು.
ಸುಮಾರು 100 ಮೀಟರ್ ಎತ್ತರದ ಟವರ್‌ಗಳನ್ನು ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ಕಟ್ಟಡ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಿಸಿರುವುದನ್ನು ಕಂಡು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಇಂದು ಮಧ್ಯಾಹ್ನ 2:30ಕ್ಕೆ ಕೇವಲ 12 ಸೆಕೆಂಡ್ಗಳಲ್ಲಿ ಸುರಕ್ಷಿತವಾಗಿ ನೆಲಸಮ ಮಾಡಲು ನಿರ್ಧರಿಸಲಾಗಿದೆ. ಕಟ್ಟಡಗಳ ನಿರ್ಮಾಣವು ಕನಿಷ್ಟ ಅಂತರದ ಅಗತ್ಯವನ್ನು ಉಲ್ಲಂಘಿಸಿರುವುದರಿಂದ ಕೆಡವಲು ಆಗಸ್ಟ್ 2021 ರಲ್ಲಿ ಕೋರ್ಟ್ ಆದೇಶಿಸಿತ್ತು. ಕೋರ್ಟ್ ಪ್ರಕಾರ, ಯುಪಿ ಅಪಾರ್ಟ್‌ಮೆಂಟ್ ಕಾಯ್ದೆಯಡಿ ಅಗತ್ಯವಿರುವಂತೆ ವೈಯಕ್ತಿಕ ಫ್ಲಾಟ್ ಮಾಲೀಕರ ಒಪ್ಪಿಗೆ ತೆಗೆದುಕೊಳ್ಳದೆ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.