ಕರೀಂನಗರ (ತೆಲಂಗಾಣ): ಕಳೆದ ವರ್ಷ ಕೊರೊನಾ ಆರಂಭದಿಂದಲೂ ಒಂದಲ್ಲೊಂದು ರೀತಿಯಲ್ಲಿ ಬಡವರು, ನಿರ್ಗತಿಕರು, ವಲಸಿಗರಿಗೆ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಅವರನ್ನು ಜನರು ದೇವರಂತೆ ನೋಡುತ್ತಿದ್ದಾರೆ. ವಿವಿಧ ರೀತಿಯಲ್ಲಿ ಅಭಿಮಾನಿಗಳು ರಿಯಲ್ ಹೀರೋ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಟನ್ ಅಂಗಡಿಗೆ ಸೋನು ಸೂದ್ ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: ಫುಡ್ ಫ್ರಂ ಸೂದ್ ಹೆಸರಿನಲ್ಲಿ ನಿತ್ಯ 5 ಸಾವಿರ ಜನರಿಗೆ ಹೊಟ್ಟೆ ತುಂಬಿಸುತ್ತಿರುವ ಸೋನು ಟ್ರಸ್ಟ್
ತೆಲಂಗಾಣದ ಕರೀಂನಗರದಲ್ಲಿ ಕನ್ನಯ್ಯ ಎಂಬ ವ್ಯಕ್ತಿ ತನ್ನ ಮಟನ್ ಶಾಪ್ಗೆ ಸೋನು ಸೂದ್ ಇಟ್ಟು ಕೆಜಿಗೆ 700 ರೂ. ಕುರಿ ಮಾಂಸವನ್ನು 600 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಉಳಿದ ನೂರು ರೂಪಾಯಿಯಲ್ಲಿ 50 ರೂ. ಗ್ರಾಹಕರ ಉಳಿತಾಯವಾಗುತ್ತಿದ್ದು, 50 ರೂಪಾಯಿಯನ್ನು ಸೋನು ಸೂದ್ ಟ್ರಸ್ಟ್ಗೆ ನೀಡುವುದಾಗಿ ಈತ ತಿಳಿಸಿದ್ದಾನೆ.