ಕೃಷ್ಣ:ಪತ್ನಿಯನ್ನು ಅಸಭ್ಯವಾಗಿ ಚಿತ್ರೀಕರಿಸಿದಕ್ಕೆ ಮನನೊಂದ ಗಂಡನೊಬ್ಬ ಸಾವನ್ನಪ್ಪಿರುವ ಘಟನೆ ಬಾಪುಲಪಾಡು ತಾಲೂಕಿನ ಎ.ಸೀತಾರಾಮಪುರಂನಲ್ಲಿ ನಡೆದಿದೆ.
ಎ.ಸೀತಾರಾಮಪುರಂನಲ್ಲಿ ದಂಪತಿ ವಾಸಿಸುತ್ತಿದ್ದರು. ಇದೇ ಗ್ರಾಮದ ವ್ಯಕ್ತಿಯೊಬ್ಬ ಅಸಭ್ಯವಾಗಿ ಮಹಿಳೆಯನ್ನು ಚಿತ್ರೀಕರಿಸಿದ್ದಾನೆ. ಈ ವಿಷಯ ಮಹಿಳೆಯ ಗಂಡನಿಗೆ ತಿಳಿದಿದೆ. ಇದರಿಂದಾಗಿ ಆತ ಮನಸ್ತಾಪಕ್ಕೊಳಗಾಗಿದ್ದನು.
ಹೆಂಡ್ತಿಯನ್ನು ಅಸಭ್ಯವಾಗಿ ಚಿತ್ರಿಕರಿಸಿದ್ದಾರೆಂದು ಕೊರಗಿ ಸಾವನ್ನಪ್ಪಿದ ಗಂಡ ಬಳಿಕ ಮಹಿಳೆ ಆರೋಪಿ ವಿರುದ್ಧ ವೀರವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನನ್ವಯ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಆದ್ರೆ, ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳದ ಕಾರಣ ಮತ್ತಷ್ಟು ಕುಗ್ಗಿ ಹೋಗಿದ್ದನು. ಇದೇ ಚಿಂತೆಯಲ್ಲಿ ಕೊರಗಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ ಎಂದು ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿ ತೆಲಪ್ರೋಲು ಮತ್ತು ಉಯೂರು ಗ್ರಾಮಗಳ ಹೆದ್ದಾರಿ ಬಳಿಯ ಆರೋಪಿ ಮನೆ ಎದುರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದಾಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಮೃತನ ಸಂಬಂಧಿಕರು ಪ್ರತಿಭಟನೆ ಹಿಂಪಡೆದರು. ಈ ಘಟನೆ ಕುರಿತು ವೀರವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.