ಪೂರ್ವ ಚಂಪಾರಣ್ (ಬಿಹಾರ್): ಜಿಲ್ಲೆಯ ಪಕ್ಡಿದಯಾಲ್ನಲ್ಲಿ ಬಂಗಾಳ ಹುಲಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಇಲ್ಲಿನ ಜೋಳದ ಹೊಲದಲ್ಲಿ ಅಡಗಿರುವ ಹುಲಿ ಕಂಡು ಜನರು ಭಯಭೀತರಾಗಿದ್ದಾರೆ. ಹುಲಿ ಅಡಗಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಪಾಟ್ನಾದಿಂದ ರಕ್ಷಣಾ ತಂಡದ ಆಗಮನಕ್ಕಾಗಿ ಸಿಬ್ಬಂದಿ ಕಾಯುತ್ತಿದ್ದಾರೆ.
ಬೆಳಗ್ಗೆ ಜನವಸತಿ ಪ್ರದೇಶದಲ್ಲಿ ಈ ಹುಲಿ ಕಾಣಿಸಿಕೊಂಡಿತ್ತು. ಬಳಿಕ ನಾಯಿಯೊಂದರೆ ಮೇಲೆ ಎರಗಿ ಗಾಯಗೊಳಿಸಿತ್ತು. ಇದನ್ನು ಕಂಡ ಸ್ಥಳೀಯರು ಹುಲಿ ಓಡಿಸಲು ಮುಂದಾಗಿದ್ದಾರೆ. ಬಳಿಕ ಅದು ಜೋಳದ ಹೊಲಕ್ಕೆ ನುಗ್ಗಿದೆ. ಈ ಸುದ್ದಿ ತಿಳಿದ ಕೂಡಲೇ ಜನರ ಗುಂಪು ಸ್ಥಳದಲ್ಲಿ ಜಮಾಯಿಸಿದ್ದಲ್ಲದೆ ಅರಣ್ಯ ಇಲಾಖೆ ಜನರನ್ನು ಚದುರಿಸುವ ಪ್ರಯತ್ನ ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸದ್ದು-ಗದ್ದಲ ಮಾಡುವ ಮೂಲಕ ಹುಲಿಯನ್ನ ಕಾಡಿಗಟ್ಟುವ ಪ್ರಯತ್ನ ನಡೆಸಿದ್ದರಾದರೂ ಅದು ಫಲ ನೀಡಲಿಲ್ಲ.