ನವದೆಹಲಿ:ಯೇಸುಕ್ರಿಸ್ತನ ಜನ್ಮದಿನದ ನಿಮಿತ್ತ ದೇಶಾದ್ಯಂತ ಕ್ರಿಶ್ಚಿಯನ್ ಸಮುದಾಯದವರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿವಿಧ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು. ವಿವಿಧ ರಾಜ್ಯಗಳಲ್ಲಿ ಮಧ್ಯರಾತ್ರಿಯಿಂದಲೇ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಚರ್ಚ್‌ಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಯಿತು. ಇನ್ನು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಕ್ರಿಸ್‌ಮಸ್ ಹಬ್ಬಕ್ಕೆ ಶುಭಾಶಯ ಕೋರಿದರು.
ಕ್ರಿಸ್ಮಸ್ ಸಂದರ್ಭದಲ್ಲಿ ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್‌ನಲ್ಲಿಯೂ ವಿಶೇಷ ಪ್ರಾರ್ಥನೆಗಳು ನಡೆದವು.
ಯೇಸುಕ್ರಿಸ್ತನ ಜನ್ಮದಿನದ ನೆನಪಿಗಾಗಿ ಕ್ರಿಸ್ಮಸ್ ಆಚರಿಸಲಾಗುತ್ತದೆ. ಕರೋಲ್ ಹಾಡುಗಾರಿಕೆ, ಬೆರಗುಗೊಳಿಸುವ ಕ್ರಿಸ್ಮಸ್ ದೀಪಗಳು ಮತ್ತು ಅಲಂಕರಿಸಿದ ಕ್ರಿಸ್ಮಸ್ ಟ್ರೀ ಹಬ್ಬದ ಮೆರಗು ಹೆಚ್ಚಿಸಿದವು.
ಪ್ಯಾರಿಸ್ ಪ್ರೀಸ್ಟ್ ವಾಲ್ಟರ್ ಡಿ ಸಾ ಸಂದೇಶ:ಪಶ್ಚಿಮ ಬಂಗಾಳದ ಸಿಲಿಗುರಿಯ ಅವರ್ ಲೇಡಿ ಕ್ವೀನ್ ಚರ್ಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಇತರ ಧರ್ಮಗಳ ಜನರು ಕೂಡ ಕ್ರಿಸ್ಮಸ್ ಆಚರಿಸಿದರು. ಮಧ್ಯರಾತ್ರಿ ನಾವು ಕ್ರಿಸ್‌ಮಸ್ ಆಚರಿಸಿದ್ದೇವೆ ಮತ್ತು ಇತರ ಧರ್ಮದವರೂ ಸೇರಿದಂತೆ ಉತ್ತಮ ಸಂಖ್ಯೆಯ ಜನರು ಅಲ್ಲಿದ್ದರು. ಅವರೆಲ್ಲರೂ ನಮ್ಮ ಕ್ರಿಸ್‌ಮಸ್ ಆಚರಣೆಯಲ್ಲಿ ಸಂತೋಷದಿಂದ ಪಾಲ್ಗೊಂಡರು. ನನ್ನ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ'' ಎಂದು ಪಣಜಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ನ ಪ್ಯಾರಿಷ್ ಪ್ರೀಸ್ಟ್ ವಾಲ್ಟರ್ ಡಿ ಸಾ ತಿಳಿಸಿದರು.
ಚನ್ನೈನ ಸಾಂಥೋಮ್ ಕ್ಯಾಥೆಡ್ರಲ್ ಬೆಸಿಲಿಕಾ ಚರ್ಚ್‌ನಲ್ಲಿಯೂ ಪ್ರಾರ್ಥನೆಗಳು ನಡೆದವು. "ಕ್ರಿಸ್‌ಮಸ್ ಎಂದರೆ ಮಾನವೀಯತೆಗಾಗಿ ಜಗತ್ತಿಗೆ ಬಂದಿರುವ ದೇವರ ಸಂತೋಷ, ಶಾಂತಿ ಮತ್ತು ಪ್ರೀತಿ. ದೇವರು ಎಲ್ಲ ಮನುಷ್ಯರಿಗೆ ಒಳಿತನ್ನು ಬಯಸಲು ಬರುತ್ತಾನೆ. ಮಾನವರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ದೇವರು ಪ್ರತಿಯೊಬ್ಬರ ಬಳಿಗೆ ಬರುತ್ತಾರೆ. ನಿಮ್ಮೆಲ್ಲರಿಗೂ ಕ್ರಿಸ್‌ಮಸ್ ಮತ್ತು ಸಮೃದ್ಧ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ" ಎಂದು ಮದ್ರಾಸ್‌ನ ಆರ್ಚ್‌ಬಿಷಪ್ ಮತ್ತು ಚನ್ನೈನ ಸ್ಯಾಂಥೋಮ್ ಕ್ಯಾಥೆಡ್ರಲ್ ಬೆಸಿಲಿಕಾ ಚರ್ಚ್‌ನ ಆರ್ಚ್‌ಬಿಷಪ್ ಜಾರ್ಜ್ ಆಂಟೋನಿಸಾಮಿ ಹೇಳಿದ್ದಾರೆ.