ಕರ್ನಾಟಕ

karnataka

ETV Bharat / bharat

ಪ್ರಧಾನಿಯ ಕಾಶ್ಮೀರ ಸರ್ವಪಕ್ಷ ಸಭೆ ಆರಂಭ; ಆರ್ಟಿಕಲ್ 370 ಮಾರ್ದನಿಸುವ ಸಾಧ್ಯತೆ - ಆರ್ಟಿಕಲ್​ 370 ರದ್ಧು

ಜಮ್ಮು-ಕಾಶ್ಮೀರ ಮುಖಂಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ನಡೆಸುತ್ತಿದ್ದು, ಎಲ್ಲರ ಕಣ್ಣು ಇದೀಗ ಅದರ ಮೇಲೆ ನೆಟ್ಟಿದೆ.

J&K Congress president
J&K Congress president

By

Published : Jun 24, 2021, 4:08 PM IST

ನವದೆಹಲಿ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿನ ಸ್ಥಿತಿ-ಗತಿ ಕುರಿತು ಮಹತ್ವದ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಇದರಲ್ಲಿ ಜಮ್ಮು-ಕಾಶ್ಮೀರದ ವಿವಿಧ ಪಕ್ಷಗಳ 14 ಮುಖಂಡರು ಭಾಗಿಯಾಗುತ್ತಿದ್ದು, ಆರ್ಟಿಕಲ್​ 370 ರದ್ದು ಸೇರಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಮಧ್ಯಾಹ್ನ 3 ಗಂಟೆಗೆ ಲೋಕ ಕಲ್ಯಾಣ್ ಮಾರ್ಗದಲ್ಲಿ ಸಭೆ ಆರಂಭಗೊಂಡಿದೆ.

ದೆಹಲಿಯಲ್ಲಿ ಈ ಸಭೆ ನಡೆಯುತ್ತಿದ್ದು, ಇದರಲ್ಲಿ ಪಿಡಿಪಿ, ನ್ಯಾಷನಲ್ ಕಾಂಗ್ರೆಸ್​ ಹಾಗೂ ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳು ಭಾಗಿಯಾಗಿವೆ. ಎಲ್ಲ ಮುಖಂಡರು ದೆಹಲಿಗೆ ಬಂದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಜಮ್ಮು-ಕಾಶ್ಮೀರ ಕಾಂಗ್ರೆಸ್​​ ಅಧ್ಯಕ್ಷ ಗುಲಾಮ್​ ಅಹ್ಮದ್​ ಮಿರ್​, ಆಗಸ್ಟ್​​ 2019ರಿಂದ ರಾಜ್ಯದ ಜನರ ಅವಮಾನ ಮಾಡಲಾಗಿದ್ದು, ವಿಭಜನೆ ನಿರ್ಧಾರದಿಂದ ಎಲ್ಲರೂ ಸಂಕಷ್ಟದಲ್ಲಿದ್ದಾರೆ ಎಂದಿದ್ದಾರೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್​ 370 ರದ್ದುಪಡಿಸಿದ ಸುಮಾರು ಎರಡು ವರ್ಷಗಳ ನಂತರ ಸಭೆ ಕರೆಯಲಾಗಿದೆ. 370 ವಿಧಿ ಪುನಃಸ್ಥಾಪನೆ ವಿಚಾರವಾಗಿ ನಾನು ಏನು ಮಾತನಾಡುವುದಿಲ್ಲ. ಆದರೆ ಈ ನಿರ್ಧಾರದಿಂದ ಜನರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಸರ್ವಪಕ್ಷ ಸಭೆಗೆ ಯಾವುದೇ ಕಾರ್ಯಸೂಚಿ ಇಲ್ಲ. ಎಲ್ಲ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಬಹುದು ಎಂದು ನಮಗೆ ತಿಳಿಸಲಾಗಿದೆ ಎಂದರು.

ಇದೇ ವೇಳೆ ಮಾತನಾಡಿರುವ ಕಾಶ್ಮೀರ ರಾಷ್ಟ್ರೀಯ ಪ್ಯಾಂಥರ್ಸ್​ ಪಕ್ಷದ ಅಧ್ಯಕ್ಷ ಭೀಮ್​ ಸಿಂಗ್​, ಜಮ್ಮು-ಕಾಶ್ಮೀರ ಪುನಃಸ್ಥಾಪಿಸಬೇಕು. ಆಹ್ವಾನ ನೀಡಿರುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370ನೇ ವಿಧಿ ರದ್ದು ಮಾಡಿದ ಬಳಿಕ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡನೆ ಮಾಡಲಾಗಿದೆ.

ಇಂದಿನ ಸರ್ವಪಕ್ಷ ಸಭೆಯಲ್ಲಿ ಜಮ್ಮು-ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 14 ಮುಖಂಡರು ಹಾಗೂ ರಾಜ್ಯಪಾಲ ಮನೋಜ್​ ಸಿನ್ಹಾ ಹಾಗೂ ಕಾಂಗ್ರೆಸ್​ನ ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ABOUT THE AUTHOR

...view details