ಕರ್ನಾಟಕ

karnataka

ETV Bharat / bharat

ಮೊಧೇರಾ ದೇಶದ ಮೊದಲ ಸೌರಶಕ್ತಿ ಗ್ರಾಮ: ನನ್ನ ಜಾತಿ ಲೆಕ್ಕಿಸದೆ ಗೆಲ್ಲಿಸಿದ್ದಾರೆ ಎಂದ ಪ್ರಧಾನಿ ಮೋದಿ - ನನ್ನ ಜಾತಿಯನ್ನೂ ಲೆಕ್ಕಿಸದೆ ಗೆಲ್ಲಿಸಿದ್ದಾರೆ

ಗುಜರಾತ್​ ಜನತೆಯು ನನ್ನನ್ನು ದಶಕಗಳ ಕಾಲ ಚುನಾವಣೆಯಲ್ಲಿ ನನ್ನ ಜಾತಿಯನ್ನೂ ಲೆಕ್ಕಿಸದೆ ಗೆಲ್ಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

people-of-gujarat-made-me-win-polls-without-looking-at-my-caste-pm-modi
ಮೊಧೇರಾ ದೇಶದ ಮೊದಲ ಸೌರಶಕ್ತಿ ಗ್ರಾಮ: ನನ್ನ ಜಾತಿ ಲೆಕ್ಕಿಸದೆ ಗೆಲ್ಲಿಸಿದ್ದಾರೆ ಎಂದ ಪ್ರಧಾನಿ ಮೋದಿ

By

Published : Oct 9, 2022, 7:31 PM IST

ಮೊಧೇರಾ (ಗುಜರಾತ್‌): ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೊಧೇರಾವನ್ನು ದೇಶದ ಮೊದಲ ಸೌರಶಕ್ತಿ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. ಮೊಧೇರಾ ಗ್ರಾಮವು ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈಗ ಇಡೀ ಗ್ರಾಮವೇ ಸೌರಶಕ್ತಿ ಚಾಲಿತವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.

ಮೊಧೇರಾ ಗ್ರಾಮದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಗುಜರಾತ್‌ ರಾಜ್ಯದ ಜನರು ನನ್ನನ್ನು ಆಶೀರ್ವದಿಸಿದ್ದಾರೆ. ನನ್ನ ಜಾತಿಯನ್ನು ಲೆಕ್ಕಿಸದೆ ಮತ ಹಾಕಿದ್ದಾರೆ ಹಾಗೂ ರಾಜಕೀಯ ಹಿನ್ನೆಲೆಯನ್ನು ನೋಡದೆ ಗುಜರಾತ್‌ನ ಜನರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಧಾನಿಯಾಗುವ ಮೊದಲು ಮೋದಿ 2001ರಿಂದ 2014ವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಈಗ ಪ್ರಧಾನಿ ಮೋದಿಯವರ ತವರು ರಾಜ್ಯವಾದ ಹಿನ್ನೆಲೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಗುರಿ ಬಿಜೆಪಿ ಮುಂದಿದೆ. ಇತ್ತ, ರಾಜ್ಯದಲ್ಲಿ 27 ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿದೆ.

ಈ ನಡುವೆ ಪ್ರಧಾನಿ ಮೋದಿ ಮೂರು ದಿನಗಳ ಕಾಲ ಗುಜರಾತ್‌ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಈ ಪ್ರವಾಸದಲ್ಲಿ ಮೋದಿ 14,600 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ:ಸೌರಶಕ್ತಿಯಿಂದ ಬೆಳಗಿದ ದೇಶದ ಮೊದಲ ಸೌರಗ್ರಾಮ ಮೊಧೇರಾ.. ನಾಳೆ ಪ್ರಧಾನಿ ಮೋದಿ ಗುಜರಾತ್​ ಭೇಟಿ

ABOUT THE AUTHOR

...view details