ಒಡಿಶಾ: ದೇಶದಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಬಿರುಸಿನಿಂದ ಸಾಗಲು ಆರೋಗ್ಯ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೂ, ಕೆಲವೆಡೆ ಮಾತ್ರ ಜನರಿಗೆ ಲಸಿಕೆ ಸಿಗುತ್ತಿಲ್ಲ. ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದರೂ, ಲಸಿಕೆ ಸಿಗದಿದ್ದಾಗ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆಗಳೂ ನಡೆದಿವೆ.
ಗಂಟೆಗಟ್ಟಲೆ ಕಾದರೂ ಸಿಗದ ವ್ಯಾಕ್ಸಿನ್ : ಬ್ಯಾರಿಕೇಡ್ ಮುರಿದು ಜನರಿಂದ ದಾಂಧಲೆ - ಬ್ಯಾರಿಕೇಡ್ ಮುರಿದು ಜನರಿಂದ ದಾಂಧಲೆ
ಆಂಧ್ರ ಪ್ರದೇಶ ಗಡಿಭಾಗದ ಜನರು ಇಲ್ಲಿಗೆ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಹೆಚ್ಚಿನ ವ್ಯಾಕ್ಸಿನೇಷನ್ ಸೆಂಟರ್ಗಳನ್ನು ತೆರೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ..
ಬ್ಯಾರಿಕೇಡ್ ಮುರಿದು ಜನರಿಂದ ದಾಂಧಲೆ
ಗಂಜಾಂನಲ್ಲಿ ವ್ಯಾಕ್ಸಿನೇಷನ್ ಸೆಂಟರ್ ಹೊರಗೆ ಗಂಟೆಗಟ್ಟಲೆ ಕಾದರೂ ಲಸಿಕೆ ಸಿಗದಿದ್ದಾಗ ಜನರು ಬ್ಯಾರಿಕೇಡ್ ಮುರಿದು ದಾಂಧಲೆ ಮಾಡಿದ್ದಾರೆ. ಬೆಳಗ್ಗೆಯಿಂದ ನಿಂತಿದ್ದರೂ, ಲಸಿಕೆ ಸಿಗುತ್ತಿಲ್ಲ. ಆಂಧ್ರ ಪ್ರದೇಶ ಗಡಿಭಾಗದ ಜನರು ಇಲ್ಲಿಗೆ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಹೆಚ್ಚಿನ ವ್ಯಾಕ್ಸಿನೇಷನ್ ಸೆಂಟರ್ಗಳನ್ನು ತೆರೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.