ಸೋನಿಪತ್/ಮಹೇಂದ್ರಗಢ:ಹರಿಯಾಣದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ಭಾರಿ ದುರಂತ ಸಂಭವಿಸಿದೆ. ಸೋನಿಪತ್ ಹಾಗೂ ಮಹೇಂದ್ರಗಢ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ.
ಮಹೇಂದ್ರಗಢ ಜಿಲ್ಲೆಯ ಮೊಹಲ್ಲಾ ಧಾನಿಯ ಗಣೇಶ ಮಂಡಲದಿಂದ ನಿಮಜ್ಜನದ ವೇಳೆ ದೊಡ್ಡ ಕಾಲುವೆಯಲ್ಲಿ ವಿಗ್ರಹವನ್ನು ಮುಳುಗಿಸುವಾಗ ಬಲವಾದ ಪ್ರವಾಹಕ್ಕೆ ಹಲವರು ಕೊಚ್ಚಿ ಹೋಗಿದ್ದಾರೆ. ಇದರಲ್ಲಿ ನಾಲ್ವರು ಮೃತಪಟ್ಟಿದ್ದು, 5 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.