ಚಂಡೀಗಢ:ಭಾರತ- ಚೀನಾ ಯುದ್ಧದಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧನ ಪತ್ನಿಗೆ ತಡೆಹಿಡಿಯಲಾಗಿದ್ದ ಪಿಂಚಣಿಯನ್ನು ಆಕೆ 56 ವರ್ಷಗಳ ಬಳಿಕ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಪ್ರಕರಣ ನಮ್ಮ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆ ಎಷ್ಟು ವೇಗವಾಗಿದೆ ಎಂಬುದರ ದ್ಯೋತಕವೂ ಆಗಬಹುದು.
1992ರಲ್ಲಿ ನಡೆದ ಚೀನಾ- ಭಾರತ ಯುದ್ಧದಲ್ಲಿ ಹುತಾತ್ಮರಾಗಿದ್ದ ಪ್ರತಾಪ್ ಸಿಂಗ್ ಎಂಬುವರ ಪತ್ನಿ ಧರ್ಮೋದೇವಿ ಅವರಿಗೆ 4 ವರ್ಷಗಳು ಪಿಂಚಣಿ ನೀಡಿ ಬಳಿಕ ಅದನ್ನು ತಡೆಹಿಡಿಯಲಾಗಿತ್ತು. ಇದರ ವಿರುದ್ಧ ಆಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ 56 ವರ್ಷಗಳ ಸುದೀರ್ಘ ಕಾಲದ ಬಳಿಕ ಇದೀಗ ಹೈಕೋರ್ಟ್ ಆಕೆ ಪಿಂಚಣಿ ಪಡೆಯಲು ಅರ್ಹಳಾಗಿದ್ದಾಳೆ. ಸರ್ಕಾರ ಅಷ್ಟು ವರ್ಷಗಳ(56) ಪಿಂಚಣಿಯನ್ನು ಶೇ.6ರ ಬಡ್ಡಿ ದರದ ಸಮೇತ ಪಾವತಿಸಬೇಕು ಎಂದು ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:ಪ್ರತಾಪ್ ಸಿಂಗ್ ಅವರು ಸಿಆರ್ಪಿಎಫ್ನ 9ನೇ ಬೆಟಾಲಿಯನ್‌ನಲ್ಲಿ ನಿಯೋಜನೆಗೊಂಡಿದ್ದರು. 1962 ರ ಇಂಡೋ-ಚೀನಾ ಯುದ್ಧದ ವೇಳೆ ಹುತಾತ್ಮರಾಗಿದ್ದರು. ಹುತಾತ್ಮ ಯೋಧನ ಪತ್ನಿಗೆ ವಿಶೇಷ ಪಿಂಚಣಿಯನ್ನು ಸರ್ಕಾರ ಮಂಜೂರು ಮಾಡಿತ್ತು. 4 ವರ್ಷಗಳ ಕಾಳ ನೀಡಿದ ಬಳಿಕ 3 ಆಗಸ್ಟ್ 1966 ರಂದು ಕಾರಣ ತಿಳಿಸದೇ ಕೇಂದ್ರ ಸರ್ಕಾರ ಪಿಂಚಣಿಯನ್ನು ಸ್ಥಗಿತಗೊಳಿಸಿತ್ತು.