ಕರ್ನಾಟಕ

karnataka

By

Published : May 20, 2022, 7:26 PM IST

ETV Bharat / bharat

ಪೆಗಾಸಸ್ ಹಗರಣ : ತನಿಖಾ ವರದಿ ಸಲ್ಲಿಕೆಗೆ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್​

ಇಸ್ರೇಲಿ ಪೆಗಾಸಸ್‌ ತಂತ್ರಾಂಶವನ್ನು ಭಾರತ ಖರೀದಿಸಿದೆ. ಪೆಗಾಸಸ್ ಸ್ಪೈವೇರ್​ನಲ್ಲಿ 300ಕ್ಕೂ ಭಾರತೀಯರ ಮೊಬೈಲ್ ಫೋನ್ ಸಂಖ್ಯೆಗಳು ಇವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟವು ವರದಿ ಮಾಡಿತ್ತು..

Supreme Court on Pegasus
ಪೆಗಾಸಸ್ ಹಗರಣ ಸುಪ್ರೀಂಕೋರ್ಟ್​ ವಿಚಾರಣೆ

ನವದೆಹಲಿ :ಪೆಗಾಸಸ್ ಗೂಢಚರ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಿಸಿರುವ ತಾಂತ್ರಿಕ ಮತ್ತು ಮೇಲುಸ್ತುವಾರಿ ಸಮಿತಿಗೆ ವರದಿ ಸಲ್ಲಿಸಲು ಸುಪ್ರೀಂಕೋರ್ಟ್​​ ಕಾಲಾವಕಾಶ ವಿಸ್ತರಿಸಿದೆ. 29 ಮೂಬೈಲ್ ಸಾಧನಗಳನ್ನು ತನಿಖೆಗೆ ಒಳಪಡಿಸಿರುವ ಸಮಿತಿಯ ಈ ಪ್ರಕ್ರಿಯೆ ಮುಗಿಸಲು ಹೆಚ್ಚುವರಿ ಸಮಯದ ಅವಶ್ಯಕತೆ ಇದೆ ಎಂದು ಸಮಿತಿ ಪರ ವಕೀಲರು ಮನವಿ ಮಾಡಿದ್ದರು.

ಪೆಗಾಸಸ್ ಗೂಢಚರ್ಯೆ ವಿಚಾರವಾಗಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಪಕ್ಷಗಳು ಮುಗಿ ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಇದರ ತನಿಖೆಗಾಗಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ಮೂವರು ಸದಸ್ಯರ ತಜ್ಞರ ಸಮಿತಿಯನ್ನು ನೇಮಿಸಿತ್ತು. ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ನ್ಯಾಯಪೀಠವು, ತಾಂತ್ರಿಕ ಸಮಿತಿ ಮೂಬೈಲ್ ಸಾಧನಗಳನ್ನು ತನಿಖೆಗೆ ಒಳಪಡಿಸಿದೆ ಮತ್ತು ಕೆಲ ಪತ್ರಕರ್ತರು ಸೇರಿದಂತೆ ಇತರ ವ್ಯಕ್ತಿಗಳ ಹೇಳಿಕೆಗಳನ್ನು ಸಹ ದಾಖಲಿಸಿಕೊಂಡಿದೆ ಎಂದು ಹೇಳಿತು.

ಅಲ್ಲದೇ, ಕೆಲ ದೋಷಪೂರಿತ ಸಾಧನಗಳನ್ನೂ ಸಮಿತಿ ತನಿಖೆಗೆ ಒಳಪಡಿಸಬೇಕಿದೆ. ಇದಕ್ಕೆ ಸಮಯ ಬೇಕಾಗಬಹುದು. ಹೀಗಾಗಿ, ಸಮಯ ವಿಸ್ತರಿಸಲಾಗುತ್ತಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಜೊತೆಗೆ ಈ ತನಿಖೆಯು ಮೇ ಅಂತ್ಯದ ವೇಳೆಗೆ ಮುಗಿಯಬಹುದು ಮತ್ತು ನಂತರ ನ್ಯಾಯಾಧೀಶರ ಪೀಠಕ್ಕೆ ಪರಿಶೀಲನೆಗಾಗಿ ವರದಿಯನ್ನು ಮಾಡುತ್ತಾರೆ. ಆದರೆ, ತಾಂತ್ರಿಕ ಸಮಿತಿಯ ಎಲ್ಲ ಪ್ರಕ್ರಿಯೆಯ್ನು ನಾಲ್ಕು ವಾರಗಳಲ್ಲಿ ಮುಗಿಸಬೇಕೆಂದು ಸೂಚಿಸಿದೆ.

ಇದನ್ನೂ ಓದಿ:ದಿಶಾ ಆರೋಪಿಗಳ ಎನ್‌ಕೌಂಟರ್ ನಕಲಿ: ಸಿರ್ಪುರ್ಕರ್ ಆಯೋಗದ ವರದಿ

ABOUT THE AUTHOR

...view details