ನವದೆಹಲಿ: ಕಾಂಗ್ರೆಸ್ ನ ಹಿರಿಯ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪೆಗಾಸಸ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜನರನ್ನು ಕತ್ತು ಹಿಸುಕಲು ಪೆಗಾಸಸ್ ಸ್ಪೈವೇರ್ ಅನ್ನು ಮೋದಿ ಅಸ್ತ್ರವಾಗಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ದೆಹಲಿಯಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ 'ಸಂಸದ್ ಘೇರಾವ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್, ದೇಶದ ನಿರುದ್ಯೋಗ ಸಮಸ್ಯೆ ಸಂಬಂಧ ಕೇಂದ್ರ ಸರ್ಕಾರವನ್ನು ಟೀಕಿಸಿದರು.
'Pegasus' ಜನರ ಕತ್ತು ಹಿಸುಕುವ ಆಯುಧವಾಗಿದೆ - ರಾಹುಲ್ ಗಾಂಧಿ ಮತ್ತೆ ಕಿಡಿ - ಕೇಂದ್ರ ಸರ್ಕಾರ
ದೇಶದ ಜನರು ಸತ್ಯ ಹೇಳದಂತೆ ತಡೆಯಲು ನರೇಂದ್ರ ಮೋದಿ ಸರ್ಕಾರ ಪೆಗಾಸಸ್ ಅನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮೋದಿ ಅಧಿಕಾರದಲ್ಲಿರುವವರೆಗೂ ದೇಶದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ ಎಂದು ಹೇಳಿದ್ದಾರೆ.
'ಪೆಗಾಸಸ್' ಜನರ ಕತ್ತು ಹಿಸುಕುವ ಆಯುಧವಾಗಿದೆ - ರಾಹುಲ್ ಗಾಂಧಿ ಮತ್ತೆ ಕಿಡಿ
ಕೇವಲ ನನ್ನ ಫೋನಿನಲ್ಲಿ ಮಾತ್ರವಲ್ಲದೆ, ಪೆಗಾಸಸ್ ಸ್ಪೈವೇರ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಭಾರತೀಯ ಯುವಕರ ಫೋನಿನಲ್ಲಿ ಗೂಢಾಚರ್ಯೆ ನಡೆಸುತ್ತಿದ್ದಾರೆ. ನೀವು ನಿಜ ಹೇಳಿದರೆ ಪ್ರಧಾನಿ ನರೇಂದ್ರ ಮೋದಿ ಮೂಗುಮುರಿಯುತ್ತಾರೆ. ಜನರನ್ನು ಮೌನವಾಗಿಸಲು ಪೆಗಾಸಸ್ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೇಶದ ಜನರು ಸತ್ಯವನ್ನು ಮಾತನಾಡುವ ದಿನ ಮೋದಿ ಸರ್ಕಾರ ಪತನವಾಗುತ್ತದೆ. ನರೇಂದ್ರ ಮೋದಿ ಪ್ರಧಾನಿಯಾಗಿರುವವರೆಗೂ ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದಿದ್ದಾರೆ.