ನವದೆಹಲಿ:ಭಾರತೀಯ ಡಿಜಿಟಲ್ ಫೈನಾನ್ಶಿಯಲ್ ಸರ್ವೀಸಸ್ ಪ್ಲಾಟ್‌ಫಾರ್ಮ್ ಪೇಟಿಎಂ ಆಂಡ್ರಾಯ್ಡ್ ಫೋನ್‌ಗಳಿಗಾಗಿ "ಸ್ಮಾರ್ಟ್ ಪಿಒಎಸ್" (ಪಾಯಿಂಟ್-ಆಫ್-ಸೇಲ್) ಅಪ್ಲಿಕೇಶನ್ ಮತ್ತು ಅದರ ಇತ್ತೀಚಿನ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಆಧಾರಿತ ಪಾವತಿಗೆ ಸೌಂಡ್‌ಬಾಕ್ಸ್ 2.0ನನ್ನು ಪರಿಚಯಿಸಿದೆ.
ಸ್ಮಾರ್ಟ್ ಪಿಒಎಸ್ನಿಂದ ಗ್ರಾಹಕರು ಸ್ಮಾರ್ಟ್‌ಫೋನ್‌ಗಳ ಮೂಲಕ ಕಾರ್ಡ್ ಪಾವತಿಗಳನ್ನು ಸ್ವೀಕರಿಸಬಹುದಾಗಿದೆ. ಪೇಟಿಎಂ ಉದ್ಯಮಕ್ಕೆ ಬೆಂಬಲಿತವಾದ ಅಪ್ಲಿಕೇಶನ್ ಆಗಿದೆ. ಸ್ಮಾರ್ಟ್ ಪಿಒಎಸ್ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಸಂಪರ್ಕವಿಲ್ಲದ ಕಾರ್ಡ್ ಪಾವತಿಗಳನ್ನು ಸ್ವೀಕರಿಸಲು ವ್ಯಾಪಾರಿಗಳಿಗೆ ಅನುವು ಮಾಡಿಕೊಡುತ್ತದೆ.
ಸೌಂಡ್‌ಬಾಕ್ಸ್ 2.0, ಸ್ಮಾರ್ಟ್ ಪಿಒಎಸ್ನನ್ನು ಬಿಡುಗಡೆ ಮಾಡಿದ ಪೇಟಿಎಂ ಸ್ಮಾರ್ಟ್ ಪಿಒಎಸ್ಗಾಗಿ ಕಾರ್ಡ್ ಪಾವತಿಗಳನ್ನು ಸುಲಭಗೊಳಿಸಲು, ವೀಸಾ ಮತ್ತು ಮಾಸ್ಟರ್ ಕಾರ್ಡ್ ಸೇರಿದಂತೆ ಪ್ರಮುಖ ಹಣಕಾಸು ಸೇವಾ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಪೇಟಿಎಂ ಹೇಳಿದೆ.
ವ್ಯಾಪಾರಿಗಳು Paytm for Business App ನಲ್ಲಿ ಸೈನ್ ಅಪ್ ಮಾಡಿ, ನಂತರ ಅವರು ತಮ್ಮ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಫೋನ್‌ಗಳಲ್ಲಿ 'Paytm Smart POS' ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.
ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ವ್ಯಾಪಾರಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳ ಹಿಂಭಾಗದಲ್ಲಿ ಕಾರ್ಡ್ನನ್ನು ಟ್ಯಾಪ್ ಮಾಡುವ ಮೂಲಕ ತಮ್ಮ ಗ್ರಾಹಕರಿಂದ ಪಾವತಿಗಳನ್ನು ಸಂಗ್ರಹಿಸಬಹುದಾಗಿದೆ.
ಪಾವತಿಯನ್ನು ಯಶಸ್ವಿಯಾಗಿ ಸಂಗ್ರಹಿಸಿ ಇತರ ಕ್ಯೂಆರ್ ಪಾವತಿಗಳೊಂದಿಗೆ ವ್ಯಾಪಾರಿ ಖಾತೆಗೆ ವರ್ಗಾಯಿಸಲಾಗುತ್ತದೆ.
ಈ ಸೇವೆಯೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಲಕ್ಷಾಂತರ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಎಂಎಸ್‌ಎಂಇಗಳು, ಟಕ್-ಅಂಗಡಿ ಮಾಲೀಕರು, ಕಿರಾನಾ ಮಳಿಗೆಗಳನ್ನು ಸಜ್ಜುಗೊಳಿಸುವ ಗುರಿ ಹೊಂದಿದೆ ಎಂದು ಪೇಟಿಎಂ ಹೇಳಿದೆ.
ಇದನ್ನೂ ಓದಿ: ಶೇ 84ರಷ್ಟು ಭಾರತೀಯರು ವೈಯಕ್ತಿಕ ಡೇಟಾ ರಕ್ಷಿಸುವ ಸಂಸ್ಥೆಗಳಿಗೆ ಆದ್ಯತೆ ನೀಡುತ್ತಾರೆ: ಸಮೀಕ್ಷೆ
"ಭಾರತದ 5 ಕೋಟಿ ಸಣ್ಣ ಮತ್ತು ಸೂಕ್ಷ್ಮ ವ್ಯಾಪಾರಿಗಳಿಗೆ ಹೊಸ ಯುಗದ ಹಣಕಾಸು ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ತರಲು ಪೇಟಿಎಂ ಬದ್ಧವಾಗಿದೆ" ಎಂದು ಪೇಟಿಎಂ ಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಕೆಲವು ವರ್ಷಗಳಲ್ಲಿ 50 ಲಕ್ಷ ಐಒಟಿ ಸಾಧನಗಳೊಂದಿಗೆ ವ್ಯವಹಾರಗಳನ್ನು ಸಜ್ಜುಗೊಳಿಸುವ ಗುರಿ ಹೊಂದಿದೆ ಎಂದು ಪೇಟಿಎಂ ಹೇಳಿದೆ.
ಎಲ್ಲಾ ಹೊಸ ಸೌಂಡ್‌ಬಾಕ್ಸ್ 2.0 ಅನ್ನು ಪರಿಚಯಿಸುತ್ತಿರುವ ಪೇಟಿಎಂ ಹೊಸ ಸಾಧನವು ಡಿಗ್‌ನೊಂದಿಗೆ ಬರುತ್ತದೆ ಎಂದು ಹೇಳಿದೆ.
ಡಿಜಿಟಲ್ ಪಾವತಿಗಳಲ್ಲಿ ‘ಪೇಟಿಎಂ ಸೌಂಡ್‌ಬಾಕ್ಸ್’ ಪ್ರಮುಖ ಪಾತ್ರ ವಹಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ‘ಸೌಂಡ್‌ಬಾಕ್ಸ್ 2.0’ ಸಾಧನವು 2000 ಎಂಎಎಚ್ ಬ್ಯಾಟರಿ, ಸಿಮ್ ಕಾರ್ಡ್ ಸ್ಲಾಟ್ ಹೊಂದಿದ್ದು, ವೈಫೈ ಸಂಪರ್ಕ ಇಲ್ಲದೆಯೇ ಕಾರ್ಯನಿರ್ವಹಿಸಬಲ್ಲದು. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು ಮತ್ತು ತೆಲುಗು ಭಾಷೆಗಳನ್ನು ಬೆಂಬಲಿಸುತ್ತದೆ.
ಹಣ ಪಾವತಿಯಾಗಿದ್ದು ಧ್ವನಿ ಮತ್ತು ಪರದೆಯಲ್ಲಿ ಏಕಕಾಲಕ್ಕೆ ಖಾತರಿಯಾಗುತ್ತದೆ. ಅಲ್ಲದೇ ದಿನದ ವಹಿವಾಟಿನಲ್ಲಿ ಪಾವತಿಯಾಗಿರುವ ಒಟ್ಟು ಮೊತ್ತದ ವಿವರ ಹಾಗೂ ಬ್ಯಾಟರಿ ಸಾಮರ್ಥ್ಯ ಮತ್ತು ಬಾಳಿಕೆ ಅವಧಿಯು ಧ್ವನಿ ಸಂದೇಶದ ಮೂಲಕ ತಿಳಿಸುತ್ತದೆ.