ಕರ್ನಾಟಕ

karnataka

ETV Bharat / bharat

ಷೇರು ಮಾರುಕಟ್ಟೆ ಪ್ರವೇಶಕ್ಕೆ ಪೇಟಿಎಂ ಸಜ್ಜು..IPO ಬೆಲೆ 2,080 -2,150 ರೂಗೆ ನಿಗದಿ: ನ.8 ರಂದು ಸಬ್​ಸ್ಕ್ರಿಪ್ಷನ್​ ಓಪನ್​ - ವಿಜಯ್ ಶೇಖರ್ ಶರ್ಮಾ

Paytm ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಡಿಜಿಟಲ್ ಸಂಸ್ಥೆ One97 ಕಮ್ಯುನಿಕೇಷನ್ಸ್, ಗುರುವಾರ ತನ್ನ ಐಪಿಒ ನವೆಂಬರ್ 8 ರಂದು 2,080-2,150 ರೂಗಳ ಬೆಲೆಯ ಬ್ಯಾಂಡ್‌ನಲ್ಲಿ ಸಬ್​ಸ್ಕ್ರಿಪ್ಷನ್​ಗಾಗಿ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದೆ.

paytm
ಪೇಟಿಎಂ

By

Published : Oct 28, 2021, 6:41 PM IST

ನವದೆಹಲಿ:ಷೇರು ಮಾರುಕಟ್ಟೆಗೆ ಪ್ರವೇಶಿಸಲು (ಐಪಿಒ) ಸಜ್ಜಾಗಿರುವ ಪೇಟಿಎಂ, ಐಪಿಒ ಮೂಲಕ ಅಂದಾಜು 18,300 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಇದು ತಾಜಾ ಈಕ್ವಿಟಿ ನೀಡುವಿಕೆಯಿಂದ ರೂ 8,300 ಕೋಟಿ ಮತ್ತು ಆಫರ್ ಫಾರ್ ಸೇಲ್ (ಒಎಫ್‌ಎಸ್) ನಿಂದ ರೂ 10,000 ಕೋಟಿಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ.

Paytm ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಡಿಜಿಟಲ್ ಸಂಸ್ಥೆ One97 ಕಮ್ಯುನಿಕೇಷನ್ಸ್, ಗುರುವಾರ ತನ್ನ ಐಪಿಒ ನವೆಂಬರ್ 8 ರಂದು 2,080-2,150 ರೂಗಳ ಬೆಲೆಯ ಬ್ಯಾಂಡ್‌ನಲ್ಲಿ ಸಬ್​ಸ್ಕ್ರಿಪ್ಷನ್​ ಓಪನ್​ ಗಾಗಿ ಷೇರು ಮಾರುಕಟ್ಟೆಯಲ್ಲಿ ತೆರೆದುಕೊಳ್ಳುತ್ತಿದೆ. ಐಪಿಒ ಚಂದಾದಾರಿಕೆಯು ನವೆಂಬರ್ 10 ರಂದು ಮುಕ್ತಾಯಗೊಳ್ಳುತ್ತದೆ.

ಒಎಫ್‌ಎಸ್ ವಿಜಯ್ ಶೇಖರ್ ಶರ್ಮಾ ಅವರಿಂದ 402.65 ಕೋಟಿ ರೂ.ವರೆಗೆ, ಆಂಟ್‌ಫಿನ್ (ನೆದರ್‌ಲ್ಯಾಂಡ್ಸ್) ಹೋಲ್ಡಿಂಗ್ಸ್‌ನಿಂದ 4,704.43 ಕೋಟಿ ರೂ.ವರೆಗೆ, ಅಲಿಬಾಬಾ.ಕಾಮ್ ಇ-ಕಾಮರ್ಸ್‌ನಿಂದ ರೂ. 784.82 ಕೋಟಿವರೆಗೆ ಮತ್ತು ಎಲಿವೇಶನ್ ಕ್ಯಾಪಿಟ್ ರೂ. 75.02 ಕೋಟಿವರೆಗೆ ಮಾರಾಟವಾಗಿದೆ.

ABOUT THE AUTHOR

...view details