ಕರ್ನಾಟಕ

karnataka

ETV Bharat / bharat

ಭಾರತೀಯ ಸೇನೆಗೆ ಸೇರುವ ಕನಸು ಭಗ್ನ.. ಆತ್ಮಹತ್ಯೆಗೆ ಶರಣಾದ ಯುವಕ - ಸೇನೆಗೆ ಸೇರಲು ವಿಫಲ, ಆತ್ಮಹತ್ಯೆಗೆ ಶರಣಾದ ಯುವಕ

ಭಾರತೀಯ ಸೇನೆಗೆ ಸೇರಿಕೊಳ್ಳಲು ವಿಫಲವಾಗಿರುವ ಕಾರಣ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

youth hang himself in bhiwani
youth hang himself in bhiwani

By

Published : Apr 30, 2022, 9:48 PM IST

ಭಿವಾನಿ(ಹರಿಯಾಣ):ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎಂಬ ಕನಸು ಕಾಣುತ್ತಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹರಿಯಾಣದ ಭಿವಾನಿಯಲ್ಲಿ ಈ ಘಟನೆ ನಡೆದಿದ್ದು, 23 ವರ್ಷದ ಪವನ್​ ಕುಮಾರ್​ ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದಾನೆ. ಕಳೆದ 9 ವರ್ಷಗಳಿಂದಲೂ 23 ವರ್ಷದ ಪವನ್​ ಸೇನೆ ಸೇರಲು ತಯಾರಿ ನಡೆಸಿದ್ದನು. ಆದರೆ, ನೇಮಕಾತಿ ಆಗದ ಕಾರಣ ಏಪ್ರಿಲ್​ 27ರಂದು ಈ ಕೃತ್ಯಕ್ಕೆ ಕೈ ಹಾಕಿದ್ದಾನೆ.

ಭಾರತೀಯ ಸೇನೆಗೆ ಸೇರುವ ಕನಸು ಭಗ್ನ... ಆತ್ಮಹತ್ಯೆಗೆ ಶರಣಾದ ಯುವಕ

ಹರಿಯಾಣ, ಪಂಜಾಬ್​​ನ ಯುವಕರು ಭಾರತೀಯ ಸೇನೆಗೆ ಹೆಚ್ಚಾಗಿ ಸೇರ್ಪಡೆಯಾಗ್ತಾರೆ. ಅದಕ್ಕಾಗಿ ಚಿಕ್ಕ ವಯಸ್ಸಿನಿಂದಲೂ ಶ್ರಮಪಟ್ಟು ತಯಾರಿ ನಡೆಸುತ್ತಾರೆ. ಅದೇ ಆಸೆ ಇಟ್ಟುಕೊಂಡು ಭಿವಾನಿಯ ಪವನ್​ ದಿನಕ್ಕೆ ಮೂರು ಸಲ ವರ್ಕೌಟ್ ಮಾಡ್ತಿದ್ದ. ಆದರೆ, ನೇಮಕಾತಿ ಆಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾರತೀಯ ಸೇನೆ ಜೊತೆ ಹರಿಯಾಣ ಸರ್ಕಾರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಪವನ್​, ಮನೆಯ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿರಲಿಲ್ಲ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.

ಇದನ್ನೂ ಓದಿ:ಕ್ಯಾನ್ಸರ್​ ಇರುವುದು ಗೊತ್ತಾಗುತ್ತಿದ್ದಂತೆ ಸೂಸೈಡ್ ನೋಟ್​ ಬರೆದಿಟ್ಟು, ನೇಣಿಗೆ ಶರಣಾದ ದಂಪತಿ

ರನ್ನಿಂಗ್​ ಟ್ರ್ಯಾಕ್​ ಮೇಲೆ ಆತ್ಮಹತ್ಯೆ ಪತ್ರ ಬರೆದ ಪವನ್​:ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಪವನ್​ ತಾನು ಓಡ್ತಿದ್ದ ರನ್ನಿಂಗ್ ಟ್ರ್ಯಾಕ್​ ಮೇಲೆ ಸೂಸೈಡ್ ನೋಟ್ ಬರೆದಿಟ್ಟಿದ್ದಾನೆ. ಈ ಸಲ ಸೇನೆ ಸೇರಲು ನನ್ನಿಂದ ಆಗಲಿಲ್ಲ. ಮುಂದಿನ ಜನ್ಮದಲ್ಲಿ ಸೈನಿಕನಾಗಿ ನಿಮ್ಮ ಕನಸು ಈಡೇರಿಸುತ್ತೇನೆ ಅಪ್ಪಾಜಿ. ಇದೀಗ ಸೇನೆ ಸೇರಲು ನನ್ನ ವಯಸ್ಸು ಕೂಡ ಮೀರಿದೆ ಎಂದು ಆತ್ಮಹತ್ಯೆ ಪತ್ರದಲ್ಲಿ ತಿಳಿಸಿದ್ದಾನೆ.

ಲಿಖಿತ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪಾಸ್​​ ಆಗಿದ್ದ ಪವನ್​:ಕಳೆದ ಕೆಲ ತಿಂಗಳ ಹಿಂದೆ ಭಾರತೀಯ ಸೇನೆ ನಡೆಸಿದ್ದ ಸೇನಾ ರ್ಯಾಲಿಯಲ್ಲಿ ಪವನ್ ಕುಮಾರ್​​ ಲಿಖಿತ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪಾಸ್​​ ಆಗಿದ್ದನಂತೆ. ಆದರೆ, ಕೊನೆಯ ಕಟ್​​ಆಫ್​​​ನಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ, ಹತಾಶೆಗೊಂಡ ಪವನ್ ಈ ನಿರ್ಧಾರ ಕೈಗೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details