ಕರ್ನಾಟಕ

karnataka

ETV Bharat / bharat

ಅತಿರೇಖದ ಅಭಿಮಾನ.. ಫ್ಯಾನ್​ ಎಡವಟ್ಟಿನಿಂದ ಕಾರಿನ ಮೇಲೆ ಬಿದ್ರು ನಟ ಪವನ್​ ಕಲ್ಯಾಣ್​​- ವಿಡಿಯೋ - pawan kalyan fell down from car

Pawan Kalyan Fell Down: ಪಶ್ಚಿಮ ಗೋದಾವರಿ ಜಿಲ್ಲೆಗೆ ಪ್ರವಾಸಕ್ಕೆಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬ ಅವರನ್ನು ತಬ್ಬಿಕೊಳ್ಳುವ ಭರದಲ್ಲಿ ಕೆಡವಿದ ಘಟನೆ ನಡೆದಿದೆ.

Pawan Kalyan Fell Down
ಕೆಳಗೆ ಬಿದ್ದ ನಟ ಪವನ್​ ಕಲ್ಯಾಣ್​​

By

Published : Feb 20, 2022, 9:42 PM IST

ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ):ನಟ ಮತ್ತು ಜನಸೇನಾ ಪಾರ್ಟಿ ಮುಖ್ಯಸ್ಥ ಪವನ್​ ಕಲ್ಯಾಣ್​​ ಭಾನುವಾರ ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರವಾಸದಲ್ಲಿದ್ದರು. ಈ ವೇಳೆ ಅಭಿಮಾನಿಯೋರ್ವ ಮಾಡಿದ ಎಡವಟ್ಟಿನಿಂದ ನಟ ಕಾರಿನ ಮೇಲೆಯೇ ಕಾಲು ಜಾರಿ ಬಿದ್ದಿದ್ದಾರೆ.

ಕಾರಿನ ಮೇಲೆಯೇ ಬಿದ್ದ ನಟ ಪವನ್​ ಕಲ್ಯಾಣ್​​

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಾಯಕ ನಟ ಕಣ್ಮುಂದೆ ಇದ್ದರೇ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇದೇ ರೀತಿ ನಟ ಪವನ್​ ಕಲ್ಯಾಣ್​ ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಹಂಬಲದಿಂದ ಅಭಿಮಾನಿಯೊಬ್ಬ ಸೆಕ್ಯೂರಿಟಿಯನ್ನು ಭೇದಿಸಿ, ಕಾರು ಹತ್ತಿ ನಟನ ಕಡೆ ಧಾನಿಸಿದ್ದಾನೆ. ಈ ವೇಳೆ ಆತ ಪವನ್​ ಕಲ್ಯಾಣ್​ ಅವರನ್ನು ತಬ್ಬಿಕೊಳ್ಳುವ ಭರದಲ್ಲಿ ಅವರನ್ನು ಕೆಳಗೆ ಕೆಡುವಿದ್ದಾನೆ.

ಇದನ್ನೂ ಓದಿ:ಟಾಕ್ ಆಫ್ ದಿ ಟೌನ್ 2022 ಫ್ಯಾಷನ್ ವೀಕ್ : ರಂಗಿನ ಉಡುಗೆ ತೊಟ್ಟು ಮಿಂಚಿದ ನಟಿಯರು

ಅಭಿಮಾನಿ, ನಟ ಪವನ್​ ಕಲ್ಯಾಣ್​ರನ್ನು ಮುಟ್ಟುತ್ತಿದ್ದಂತೆ ಅವರು ದಿಢೀರ್​ ಕೆಳಗೆ ಬಿದ್ದಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ. ಈ ಘಟನೆಯಿಂದ ನಟ ಪವನ್ ಕಲ್ಯಾಣ್​ ಜೊತೆಗೆ ಅಭಿಮಾನಿಗಳು ಸಹ ಆತಂಕಗೊಂಡಿದ್ದರು. ಆದ್ರೆ ಟಾಲಿವುಡ್​ ಪವರ್​ ಸ್ಟಾರ್​ಗೆ ಈ ಘಟನೆಯಲ್ಲಿ ಏನು ಆಗಿಲ್ಲ, ಅಲ್ಲದೇ ಅವರು ಸುರಕ್ಷಿತವಾಗಿದ್ದಾರೆ.

ABOUT THE AUTHOR

...view details