ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಮತ್ತು ಪವನ್​ ಕಲ್ಯಾಣ ಭೇಟಿ.. ಆಂಧ್ರಪ್ರದೇಶ ರಾಜಕೀಯದಲ್ಲಿ ಕುತೂಹಲ

ಚಿತ್ರನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಪವನ್​ ಕಲ್ಯಾಣ್​ ಮಾಹಿತಿ ನೀಡಿದ್ದಾರೆ.

Pawan Kalyan calls on PM Modi in Vizag  Film star and Jana Sena Party president  Jana Sena Party president Pawan Kalya  Pawan Kalyan met Prime Minister Narendra Modi  ಮೋದಿ ಭೇಟಿಯಿಂದ ರಾಜ್ಯಕ್ಕೆ ಉತ್ತಮ ಭವಿಷ್ಯವಿದೆ  ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್  ಪ್ರಧಾನಿ ನರೇಂದ್ರ ಮೋದಿ  ಆಂಧ್ರಪ್ರದೇಶದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ  ಬಿಜೆಪಿ ರಾಷ್ಟ್ರೀಯ ನಾಯಕತ್ವದ ಆಹ್ವಾನ  ಜನಸೇನಾ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ
ಮೋದಿ ಭೇಟಿಯಿಂದ ರಾಜ್ಯಕ್ಕೆ ಉತ್ತಮ ಭವಿಷ್ಯವಿದೆ ಎಂದು ಭಾವಿಸುತ್ತೇನೆ

By

Published : Nov 12, 2022, 9:34 AM IST

ವಿಶಾಖಪಟ್ಟಣ(ಆಂಧ್ರಪ್ರದೇಶ): ಚಿತ್ರನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಆಂಧ್ರಪ್ರದೇಶದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮತ್ತು ನಟ ಪವನ್​ ಕಲ್ಯಾಣ್ ನಡುವಿನ ಭೇಟಿಯು ರಾಜ್ಯದಲ್ಲಿ ಪ್ರಸ್ತುತ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ಜನಸೇನಾ ಎಪಿಯಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದೆ.

ಬಿಜೆಪಿ ರಾಷ್ಟ್ರೀಯ ನಾಯಕತ್ವದ ಆಹ್ವಾನದ ಮೇರೆಗೆ ಪವನ್​ ಕಲ್ಯಾಣ್ ಶುಕ್ರವಾರ ರಾತ್ರಿ ಬಂದರು ನಗರಿಗೆ ಆಗಮಿಸಿರುವ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಟಾಲಿವುಡ್​ ಪವರ್​ಸ್ಟಾರ್​ ಪವನ್​ ಕಲ್ಯಾಣ್, ಜನಸೇನಾ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂಡ್ಲ ಮನೋಹರ್ ಅವರೊಂದಿಗೆ ಐಎನ್‌ಎಸ್ ಚೋಲಾ ಸೂಟ್‌ನಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದರು. 30 ನಿಮಿಷಗಳ ಸಭೆಯಲ್ಲಿ ಮೋದಿ ಅವರು ಕಲ್ಯಾಣ್ ಅವರೊಂದಿಗೆ ಪರಸ್ಪರ ಸಂವಾದ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜನಸೇನಾ ಮುಖ್ಯಸ್ಥರು, ಮೋದಿ ಭೇಟಿಯಿಂದ ರಾಜ್ಯಕ್ಕೆ ಉತ್ತಮ ಭವಿಷ್ಯವಿದೆ ಎಂದು ಭಾವಿಸುತ್ತೇನೆ. ಎರಡು ದಿನಗಳ ಹಿಂದೆ ಪ್ರಧಾನಿ ಚೇರಿಯಿಂದ ಕರೆ ಬಂದಿತ್ತು. 8 ವರ್ಷಗಳ ನಂತರ ಮೋದಿಯನ್ನು ಭೇಟಿಯಾಗಿದ್ದೇನೆ. ಎಲ್ಲವನ್ನೂ ಪ್ರಧಾನಿ ಮೋದಿ ವಿಚಾರಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಅವರ ಭೇಟಿ ನಡೆದಿದೆ. ರಾಜ್ಯ ಚೆನ್ನಾಗಿರಲಿ ಎಂಬುದು ಪ್ರಧಾನಿ ಮೋದಿಯವರ ಆಶಯ ಎಂದು ಪವನ್ ಕಲ್ಯಾಣ್​ ಸ್ಪಷ್ಟಪಡಿಸಿದರು.

ರಾಜ್ಯ ಬಿಜೆಪಿ ಕೋರ್ ಕಮಿಟಿಯೊಂದಿಗೆ ಮೋದಿಯವರ ಸಂವಾದದ ನಂತರ ಸಭೆ ನಡೆಯಬೇಕಾಗಿದ್ದರೂ, ಪ್ರಧಾನಿ ಆಗಮನವು 40 ನಿಮಿಷಗಳ ಕಾಲ ವಿಳಂಬವಾದ ಕಾರಣ ಕಲ್ಯಾಣ್​ರನ್ನು ಮೊದಲು ಕರೆಯಲಾಯಿತು. ಮೋದಿ ಮತ್ತು ಪವನ್​ ಕಲ್ಯಾಣ್ ನಡುವಿನ ಸಂವಾದದಲ್ಲಿ ಏನಾಯಿತು ಎಂಬುದನ್ನು ಜನಸೇನೆ ಅಥವಾ ಬಿಜೆಪಿ ನಾಯಕರು ಬಹಿರಂಗಪಡಿಸಿಲ್ಲ. ನಂತರ ಪ್ರಧಾನಿ ಅವರು ಬಿಜೆಪಿ ಕೋರ್ ಕಮಿಟಿ ಸದಸ್ಯರನ್ನು ಭೇಟಿ ಮಾಡಿದರು ಮತ್ತು ರಾಜ್ಯದ ರಾಜಕೀಯ ಸನ್ನಿವೇಶದ ಬಗ್ಗೆ ಚರ್ಚಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಓದಿ:ಶೀಘ್ರವೇ ಜಗನ್​ ಸರ್ಕಾರ ಪತನ: ಜನಸೇನಾ ಅಧ್ಯಕ್ಷ, ನಟ ಪವನ್ ಕಲ್ಯಾಣ್

ABOUT THE AUTHOR

...view details