ನವದೆಹಲಿ: ಭಾರತದಲ್ಲಿ ಪ್ಯಾಸೆಂಜರ್ ವಾಹನಗಳ ಸಗಟು ಮಾರಾಟವು ಕಳೆದ ತಿಂಗಳು ಶೇ 10 ರಷ್ಟು ಕುಸಿದು 2,61,633 ಕ್ಕೆ ತಲುಪಿದೆ. ಈ ವರ್ಷದ ಮಾರ್ಚ್‌ಗೆ ಹೋಲಿಸಿದರೆ ವಿವಿಧ ರಾಜ್ಯಗಳಲ್ಲಿ ಕೊರೊನಾ ನಿರ್ಬಂಧಗಳು ಬೇಡಿಕೆಯ ಮೇಲೆ ಪರಿಣಾಮ ಬೀರಿವೆ ಎಂದು ವಾಹನ ಉದ್ಯಮ ಸಂಸ್ಥೆ ಸಿಯಾಮ್ ತಿಳಿಸಿದೆ.
ಮಾರ್ಚ್ 2021 ರಲ್ಲಿ ಪ್ರಯಾಣಿಕರ ವಾಹನ ಮಾರಾಟ 2,90,939 ಯೂನಿಟ್ ಆಗಿತ್ತು. ಕೊರೊನಾ ವೈರಸ್ ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣ 2020 ರ ಏಪ್ರಿಲ್‌ನಲ್ಲಿ ಪ್ರಯಾಣಿಕರ ವಾಹನ ಮಾರಾಟ ಇರಲಿಲ್ಲ.
"ನಿರೀಕ್ಷೆಯಂತೆ, ಕೊರೊನಾ ಏಪ್ರಿಲ್ 2021 ರಲ್ಲಿ ವಾಹನಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಮಾರ್ಚ್ 2021 ಕ್ಕೆ ಹೋಲಿಸಿದರೆ ಪ್ರಯಾಣಿಕರ ವಾಹನಗಳ ಮಾರಾಟವು ಶೇ 10.07 ರಷ್ಟು ಕುಸಿದಿದೆ. ಕೊರೊನಾ ಉಲ್ಬಣವನ್ನು ಅನುಭವಿಸುತ್ತಿರುವ ರಾಜ್ಯಗಳಲ್ಲಿನ ವಿವಿಧ ನಿರ್ಬಂಧಗಳಿಂದಾಗಿ ಈ ಪರಿಣಾಮ ಬೀರಿದೆ”ಎಂದು ಸಿಯಾಮ್ ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ.