ಮುಂಗೇರ್ (ಬಿಹಾರ) :ಬಿಹಾರದ ಮುಂಗೇರ್‌ನ ಜಮಾಲ್‌ಪುರ ಬಳಿ ಶುಕ್ರವಾರ ಪ್ಯಾಸೆಂಜರ್ ರೈಲಿನ ಕೆಲವು ಬೋಗಿಗಳು ಹಳಿತಪ್ಪಿವೆ. ಈ ಕಾರಣದಿಂದಾಗಿ, ಜಮಾಲ್‌ಪುರ-ಭಾಗಲ್‌ಪುರ ಮತ್ತು ಜಮಾಲ್‌ಪುರ - ಕಿಯುಲ್ ರೈಲ್ವೆ ವಿಭಾಗಗಳಲ್ಲಿ 1 ಡಜನ್‌ಗೂ ಹೆಚ್ಚು ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ಘಟನೆ ನಂತರ ರೈಲ್ವೆ ಆಡಳಿತವು ಅನೇಕ ಸ್ಥಳಗಳಲ್ಲಿ ರೈಲುಗಳನ್ನು ಅಲ್ಲಲ್ಲಿಯೇ ನಿಲ್ಲಿಸುವಂತೆ ತಿಳಿಸಿದೆ. ಇದರಿಂದಾಗಿ ರೈಲ್ವೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹಳಿತಪ್ಪಿದ ನಾಲ್ಕು ಬೋಗಿಗಳು: ಮಾಹಿತಿಯ ಪ್ರಕಾರ, ಜಮಾಲ್‌ಪುರ - ಸಾಹಿಬ್‌ಗಂಜ್ ವಾರ್ಡ್‌ವಾನ್ ಪ್ಯಾಸೆಂಜರ್ ರೈಲು ಶುಕ್ರವಾರ ಬೆಳಿಗ್ಗೆ ಜಮಾಲ್‌ಪುರ ಲೊಕೊ ಯಾರ್ಡ್‌ನಿಂದ ಪ್ಲಾಟ್‌ಫಾರ್ಮ್‌ನಲ್ಲಿ ಹೊರಡುವಾಗ ರೈಲಿನ ನಾಲ್ಕು ಭೋಗಿಗಳು ಹಳಿತಪ್ಪಿವೆ. ಇದರಿಂದ ಜಮಾಲ್‌ಪುರ ರೈಲು ನಿಲ್ದಾಣದಲ್ಲಿ ಮೇಲಕ್ಕೆ ಮತ್ತು ಕೆಳಕ್ಕೆ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ರೈಲು ಬೋಗಿಗಳು ಹಳಿ ತಪ್ಪಿದ ನಂತರ ರೈಲ್ವೆಯ ಪರಿಹಾರ ಮತ್ತು ರಕ್ಷಣಾ ತಂಡ ಸಮರೋಪಾದಿಯಲ್ಲಿ ಕೆಲಸ ಮಾಡಿ, ಎಲ್ಲ ಅಡೆ ತಡೆಗಳನ್ನು ನಿವಾರಣೆ ಮಾಡಿದೆ.
ಎಲ್ಲೆಂದರಲ್ಲಿ ನಿಂತಿರುವ ದೊಡ್ಡ ರೈಲುಗಳು :ಈ ಅವಘಡದಲ್ಲಿ ಜನರು ಸುರಕ್ಷಿತವಾಗಿದ್ದರೂ ರೈಲುಗಳ ಓಡಾಟಕ್ಕೆ ಸಂಪೂರ್ಣ ತೊಂದರೆಯಾಗಿದೆ. ರೈಲು ಬೋಗಿಗಳು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ. ಟ್ರ್ಯಾಕ್ ದೋಷದಿಂದ ಇಂತಹ ಘಟನೆ ನಡೆದಿದೆ ಎಂದು ಊಹಿಸಲಾಗಿದೆ. ಪ್ಯಾಸೆಂಜರ್ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿದ ಕಾರಣ ಜಮಾಲ್‌ಪುರ ಜಂಕ್ಷನ್ ಮೂಲಕ ಹಾದು ಹೋಗುವ ಅಪ್ ಮತ್ತು ಡೌನ್ ರೈಲುಗಳಿಗೆ ತೊಂದರೆಯಾಗಿದೆ. ಮತ್ತೊಂದೆಡೆ, ದೆಹಲಿಯಿಂದ ಹೋಗುವ ವಿಕ್ರಮಶಿಲಾ ಎಕ್ಸ್‌ಪ್ರೆಸ್, ಹೌರಾದಿಂದ ಬರುವ ಸೂಪರ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ಸಂಚಾರದಲ್ಲಿ ವ್ಯತ್ಯಯವಾಯಿತು.