ಕರ್ನಾಟಕ

karnataka

ETV Bharat / bharat

ನಿಲ್ದಾಣದಲ್ಲಿ ನಿಂತಿದ್ದ ಪ್ಯಾಸೆಂಜರ್​ ರೈಲಿನಲ್ಲಿ ಬೆಂಕಿ; ಸುಟ್ಟು ಕರಕಲಾದ ಬೋಗಿ - train bogie caught fire while standing at station

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಜ್ವಾಲೆ ಬೇರೆ ಬೋಗಿಗಳಿಗೆ ಹರಡುವುದನ್ನು ತಪ್ಪಿಸಿದ್ದಾರೆ.

passenger train bogie caught fire while standing at station
ನಿಲ್ದಾಣದಲ್ಲಿ ನಿಂತಿದ್ದ ಪ್ಯಾಸೆಂಜರ್​ ರೈಲಿನಲ್ಲಿ ಬೆಂಕಿ

By

Published : Nov 21, 2022, 10:16 AM IST

Updated : Nov 21, 2022, 10:36 AM IST

ಉಜ್ಜಯಿನಿ(ಮಧ್ಯಪ್ರದೇಶ):ನಗರದ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ 8ರಲ್ಲಿ ನಿಂತಿದ್ದ ರತ್ಲಾಮ್-ಇಂದೋರ್-ಬಿನಾ ಪ್ಯಾಸೆಂಜರ್ ರೈಲಿನ ಬೋಗಿಗೆ ಹಠಾತ್ ಬೆಂಕಿ ಹೊತ್ತಿಕೊಂಡಿದ್ದು ಒಂದು ಬೋಗಿ ಸಂಪೂರ್ಣ ಸುಟ್ಟು ಭಸ್ಮವಾಯಿತು. ಈ ಘಟನೆ ಭಾನುವಾರ ರಾತ್ರಿ ನಡೆದಿದೆ.

"ನಾನು ರೈಲು ನಿಲ್ದಾಣದ ಮೇಲ್ಸೇತುವೆಯನ್ನು ದಾಟುತ್ತಿದ್ದಾಗ ರೈಲಿನ ಹಿಂದಿನಿಂದ ಮೂರನೇ ಬೋಗಿಯಲ್ಲಿ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದೆ" ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು. ಮಾಹಿತಿ ಸಿಕ್ಕ ತಕ್ಷಣವೇ ತಕ್ಷಣವೇ ರೈಲ್ವೇ ಪೊಲೀಸರು ಹಾಗೂ ಆರ್​ಪಿಎಫ್​ ಸಿಬ್ಬಂದಿ ಸ್ಥಳ ತಲುಪಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಜತೆಗೆ, ಬೇರೆ ಬೋಗಿಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.

ನಿಲ್ದಾಣದಲ್ಲಿ ನಿಂತಿದ್ದ ಪ್ಯಾಸೆಂಜರ್​ ರೈಲಿನಲ್ಲಿ ಬೆಂಕಿ

ಈ ಪ್ಯಾಸೆಂಜರ್​ ರೈಲು ಜಿಲ್ಲೆಯ ನಗ್ಡಾ ನಿಲ್ದಾಣದಿಂದ ಉಜ್ಜಯಿನಿ ನಿಲ್ದಾಣಕ್ಕೆ ಬಂದು ಫ್ಲ್ಯಾಟ್​ಪಾರ್ಮ್​ 5ರಲ್ಲಿ ನಿಂತಿತ್ತು. ಸ್ವಲ್ಪ ಸಮಯದ ನಂತರ ಫ್ಲ್ಯಾಟ್​ಫಾರ್ಮ್​ 8ಕ್ಕೆ ತೆರಳಿದೆ. ರೈಲು ಬೆಳಗ್ಗೆ 8 ಗಂಟೆಗೆ ಉಜ್ಜಯಿನಿಯಿಂದ ಇಂದೋರ್​ಗೆ ಹೊರಡಬೇಕಿತ್ತು. ಅದೃಷ್ಟವಶಾತ್​ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ರೈಲ್ವೇ ಠಾಣೆಯ ಜಿಆರ್‌ಪಿ ಉಸ್ತುವಾರಿ ಆರ್‌ಎಸ್‌ ಮಹಾಜನ್‌ ತಿಳಿಸಿದರು.

ಸಾಮಾನ್ಯವಾಗಿ ಬೆಳಗ್ಗೆ ಹೊರಡುವ ರೈಲುಗಳನ್ನು ಫ್ಲ್ಯಾಟ್‌ಫಾರ್ಮ್​ 7, 8 ರಲ್ಲಿ ನಿಲ್ಲಿಸಲಾಗುತ್ತದೆ. ಒಂದು ವೇಳೆ ಹೆಚ್ಚು ಜನರಿರುವ ಫ್ಲ್ಯಾಟ್​ಫಾರ್ಮ್​ 1, 2 ಮತ್ತು 3ರಲ್ಲಿ ಈ ಅಪಘಾತ ಸಂಭವಿಸುತ್ತಿದ್ದರೆ ಬಹಳ ಪ್ರಾಣಹಾನಿಯಾಗುತ್ತಿತ್ತು. ಅಗ್ನಿ ಅನಾಹುತಕ್ಕೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಶಾರ್ಟ್​ ಸರ್ಕ್ಯೂಟ್​ನಿಂದ ಅವಘಡ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಒಂದು ವೇಳೆ ಇದರಲ್ಲಿ ಸಮಾಜಘಾತುಕರ ಕೈವಾಡವಿರಬಹುದೇ ಎಂಬುದನ್ನು ಕಂಡುಹಿಡಿಯಲು ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ:ಶಾಲಿಮಾರ್ ಎಕ್ಸ್​ಪ್ರೆಸ್​​ ಲಗೇಜ್ ಬೋಗಿಗೆ ಬೆಂಕಿ: ಪ್ರಯಾಣಿಕರು ಪಾರು

Last Updated : Nov 21, 2022, 10:36 AM IST

ABOUT THE AUTHOR

...view details