ನವದೆಹಲಿ:ವರ್ಷದ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ನಡೆಯುತ್ತಿದ್ದು, ವಿವಿಧೆಡೆ ಗೋಚರವಾಗುತ್ತಿದೆ. ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಹಣದ ಸೂತಕದಲ್ಲಿ ಆಚರಿಸಬೇಕಾಗಿದ್ದು, ದೇಶದಲ್ಲಿ ಸೂರ್ಯಗ್ರಹಣ 4 ಗಂಟೆ ಅವಧಿ ಇರಲಿದೆ.
ಸೂರ್ಯ ತನ್ನ ಒಂದು ಧ್ರುವವನ್ನು ಕಳೆದುಕೊಳ್ಳುತ್ತಿರುವ ಮಾದರಿಯಲ್ಲಿ ಜಮ್ಮು- ಕಾಶ್ಮೀರದಲ್ಲಿ ಗೋಚರವಾದರೆ, ಪಂಜಾಬ್ನ ಅಮೃತಸರದಲ್ಲಿ ಕೆಂಪಾಗಿರುವ ಸೂರ್ಯನ ಚಿತ್ರವನ್ನು ಜನರು ಸೆರೆ ಹಿಡಿದಿದ್ದಾರೆ. ಹರಿಯಾಣದಲ್ಲೂ ಸೂರ್ಯ ಅಗೋಚರವಾಗುತ್ತಿರುವ ದೃಶ್ಯ ಕಂಡುಬಂದಿದೆ. ಈ ಮಧ್ಯೆಯೇ ಭಕ್ತರು ದೋಷ ಪರಿಹರಿಸಿಕೊಳ್ಳಲು ನದಿಯಲ್ಲಿ ಸ್ನಾನಾದಿ ಕಾರ್ಯಗಳಲ್ಲಿ ತೊಡಗಿದ್ದಾರೆ.