ಜಮುಯಿ(ಬಿಹಾರ): ಗಿಳಿ ಸ್ಪಷ್ಟವಾಗಿ ಮಾತನಾಡಬಲ್ಲದೆಂದು ತಾವೂ ಯೋಚಿಸಿದ್ದೀರಾ? ಗಿಳಿ ವಿವಿಧ ರೀತಿ ಧ್ವನಿ ಮಾಡಬಲ್ಲದು.. ಹಾಡುವುದನ್ನು ಕೇಳಿ ತಾವೂ ಆನಂದಿಸಿರಬಹದು. ಆದರೆ ಬಿಹಾರದ ಜಮುಯಿ ಜಿಲ್ಲೆಯ ಹಳ್ಳಿಯೊಂದರ ಗಿಳಿಯೊಂದು ದೇಶದ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳುತ್ತಿದೆ.. ಇದು ಬಿಹಾರ ರಾಜ್ಯಾದ್ಯಂತ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ..
ಈ ಗಿಳಿಯೂ ಜೈ ಶ್ರೀ ರಾಮ್.. ಮೋದಿ ಸರ್ಕಾರ್ ಜಿಂದಾಬಾದ್ ಸ್ಪಷ್ಟವಾಗಿ ಹಾಡುತ್ತದೆ. ಇಷ್ಟೇ ಅಲ್ಲ, ಹಿಂದೂಸ್ತಾನದ ಬಗ್ಗೆ ಮಾತನಾಡುತ್ತಿದ್ದ ವೇಳೆ ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗುತ್ತಿದೆ. ಈ ಗಿಳಿಯನ್ನು ನೋಡಲು ದಂಡು ದಂಡಾಗಿ ಜನರು ಟೆಟಾರಿಯಾ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಈ ಗಿಳಿ ಬೆಳಗಿನ ಜಾವದವರೆಗೆ ನರೇಂದ್ರ ಮೋದಿ ಜಿಂದಾಬಾದ್, ಮೋದಿ ಸರ್ಕಾರ್ ಜಿಂದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗುತ್ತಲೇ ಇರುತ್ತದೆ ಎನ್ನುತ್ತಾರೆ ಮಂಟು ಸಾವ್.
ನಾಲ್ಕು ವರ್ಷಗಳ ಹಿಂದೆ ಜಮುಯಿ ಜಿಲ್ಲೆಯ ಲಕ್ಷ್ಮೀಪುರ ಬ್ಲಾಕ್‌ನ ಟೆಟಾರಿಯಾ ಗ್ರಾಮದ ಮಂಟು ಸಾವ್ ಎಂಬ ವ್ಯಕ್ತಿ ಈ ಗಿಳಿಯನ್ನು ಕಾಡಿನಿಂದ ತನ್ನ ಮನೆಗೆ ತಂದು ಸಾಕಿದ್ದನು. ಈ ಕಾರ್ಮಿಕ ರೈತ ತನ್ನ ಮುದ್ದಿನ ಗಿಳಿಗೆ ಹಿಂದೂಸ್ತಾನ್ ಎಂಬ ಘೋಷಣೆ ಕೂಗುವ ರೀತಿ ತರಬೇತಿ ನೀಡಿದ್ದನು. ಅದೇ ರೀತಿ ಜಿಂದಾಬಾದ್ ಮತ್ತು ಮೋದಿ ಸರ್ಕಾರ್ ಜಿಂದಾಬಾದ್, ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತಿದೆ. ಅಷ್ಟೇ ಅಲ್ಲ, ಅದಕ್ಕೆ ಹಸಿವು ಆಗಿದ್ದಾಗ ಆಹಾರ ಮತ್ತು ಬಾಯಾರಿಕೆಯಾದಾಗ ನೀರಿಗಾಗಿ ಸ್ಪಷ್ಟವಾಗಿ ಮಾತನಾಡುತ್ತದೆ.
ಗಿಳಿಯು ಮೋದಿ ಅಭಿಮಾನಿ: ಕೃಷಿ ಕಾರ್ಮಿಕ ಮಂಟು ಸಾವ್ ಗಿಳಿಗೆ ತರಬೇತಿ ನೀಡಿದ ಬಳಿಕ, ಮಾನವರಂತೆ ಭಾಷೆಯಲ್ಲಿ ಮಾತನಾಡುತ್ತದೆ. 100 ವಿವಿಧ ಉಪಭಾಷೆಗಳಲ್ಲಿ ಧ್ವನಿ ಮಾಡುತ್ತದೆ. ಗಿಳಿ ಯಾವಾಗಲೂ ಮೋದಿ ಮತ್ತು ಮೋದಿ ಸರ್ಕಾರ ಹೊಗಳುತ್ತದೆ. ಕೃಷಿ ಕಾರ್ಮಿಕ ಮಂಟು ಸಾವ್ ಕೂಡ ಮೋದಿ ಅಭಿಮಾನಿಯಾಗಿದ್ದು, ಹೀಗಾಗಿ ಗಿಳಿಯೂ ಸಹ ತನ್ನ ಮಾಲೀಕನ ತರಹ ಮೋದಿ ಸರ್ಕಾರದ ಅಭಿಮಾನಿಯಾಗಿ ಮಾರ್ಪಟ್ಟು ಜನರ ಮೆಚ್ಚುಗೆ ಗಳಿಸಿದೆ.