ಕರ್ನಾಟಕ

karnataka

ETV Bharat / bharat

17ನೇ ಲೋಕಸಭೆಯ ಅಂತಿಮ ಅಧಿವೇಶನ, ಫೆ.1ರಂದು ಮಧ್ಯಂತರ ಬಜೆಟ್ ಮಂಡನೆ: ನಿರೀಕ್ಷೆಗಳೇನು? - ಮಧ್ಯಂತರ ಬಜೆಟ್ ಮಂಡನೆ

Nirmala Sitharaman will present the Interim Budget on 1st February: ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್​ ನಿರೀಕ್ಷೆಗಳು ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Parliament's Budget session from January 31
ಫೆ.1ರಂದು ಮಧ್ಯಂತರ ಬಜೆಟ್ ಮಂಡನೆ: ನಿರೀಕ್ಷೆಗಳೇನು?

By PTI

Published : Jan 13, 2024, 10:30 AM IST

ನವದೆಹಲಿ:17ನೇ ಲೋಕಸಭೆಯ ಅಂತಿಮ ಬಜೆಟ್ ಅಧಿವೇಶನವು ಜನವರಿ 31ರಿಂದ ಆರಂಭವಾಗಲಿದ್ದು, ಫೆಬ್ರವರಿ 9ರವರೆಗೆ ನಡೆಯಲಿದೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮುಂದಿನ ಲೋಕಸಭೆ ಅವಧಿಗೆ ಚುನಾವಣೆ ಜರುಗಿರುವುದರಿಂದ ಈ ಬಜೆಟ್ ಮಹತ್ವ ಪಡೆದಿದೆ.

ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗುವ ಕುರಿತು ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳು ಶುಕ್ರವಾರ ಅಧಿಸೂಚನೆಗಳನ್ನು ಹೊರಡಿಸಿದ್ದಾರೆ. ಅಲ್ಲದೇ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಹ ಅಧಿವೇಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಧ್ಯಂತರ ಬಜೆಟ್ ಅಧಿವೇಶನ ಮತ್ತು 17ನೇ ಲೋಕಸಭೆಯ ಅಂತಿಮ ಅಧಿವೇಶನವು ಜನವರಿ 31ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ. ಸಂಸತ್ತಿನಲ್ಲಿ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಕೇಂದ್ರ ಬಜೆಟ್ ಮಂಡಿಸುತ್ತಾರೆ ಎಂದು ತಮ್ಮ 'ಎಕ್ಸ್​' ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಬಜೆಟ್​ ನಿರೀಕ್ಷೆಗಳೇನು?:17ನೇ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆ ಘೋಷಣೆಗೂ ಮುನ್ನ ಇದು ಸಂಸತ್ತಿನ ಕೊನೆಯ ಅಧಿವೇಶನವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಮಂಡಿಸುತ್ತಿರುವ ಆರನೇ ಬಜೆಟ್ ಇದಾಗಿದೆ. ಪ್ರಸ್ತುತ ಬಜೆಟ್​ 2024ರ ಏಪ್ರಿಲ್ 1ರಿಂದ ಪ್ರಾರಂಭವಾಗುವ ಮತ್ತು 2025ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ್ದಾಗಿದೆ.

ಈ ಬಜೆಟ್ ವೋಟ್ ಆನ್ ಅಕೌಂಟ್ ಮೇಲೆ ಚರ್ಚೆ ನಡೆಯಲಿದೆ. ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸುವ ಅಗತ್ಯವಿದೆ. ಚುನಾವಣಾ ವರ್ಷದಲ್ಲಿ ದೇಶದ ವೆಚ್ಚ ಭರಿಸಲು ಸರ್ಕಾರದ ಬಳಿ ಎಷ್ಟು ಹಣವಿದೆ?, ಅದನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬ ಕುರಿತು ಚರ್ಚಿಸಲಾಗುತ್ತದೆ.

ಇದೇ ವೇಳೆ, ಈ ಬಜೆಟ್​ ಮೂಲಕ ಚುನಾವಣೆಗೂ ಮತದಾರರನ್ನು ಓಲೈಸಲು ಸಹ ಸರ್ಕಾರ ಯೋಜಿಸುವ ಸಾಧ್ಯತೆ ಹೆಚ್ಚು. ಅಂತೆಯೇ, ಮಧ್ಯಂತರ ಬಜೆಟ್​ಅನ್ನು ಐದು ಪ್ರಮುಖ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಇವರಲ್ಲಿ ಮಹಿಳೆಯರು, ಬಡವರು, ಯುವಕರು, ರೈತರು ಮತ್ತು ಆದಿವಾಸಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.

ಈ ವರ್ಗಗಳಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಯೋಜನೆಗಳ ಅನುದಾನ ಹಂಚಿಕೆಯಲ್ಲಿ ಹೆಚ್ಚಳವನ್ನು ಕಾಣುವ ಸಾಧ್ಯತೆಯಿದೆ. ಇದಲ್ಲದೇ, ಹೊಸ ಯೋಜನೆಗಳನ್ನೂ ಘೋಷಿಸಬಹುದು. ಪ್ರಮುಖವಾಗಿ ಮಹಿಳೆಯರು ಮತ್ತು ಶಿಕ್ಷಣದ ಬಗ್ಗೆ ಗಮನ ಹರಿಸಲಾಗುತ್ತಿದೆ. ಕೇಂದ್ರವು 2023-24ರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಮತ್ತು ಉನ್ನತ ಶಿಕ್ಷಣವನ್ನು ನಿರ್ವಹಿಸುವ ಎರಡು ಇಲಾಖೆಗಳಿಗೆ 1.12 ಲಕ್ಷ ಕೋಟಿ ರೂ. ಅನುದಾನ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗುತ್ತದೆ.

ಮತ್ತೊಂದೆಡೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6,000 ರೂ. ನೆರವು ಕಲ್ಪಿಸುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೂ ಅನುದಾನ ಹೆಚ್ಚಿಸಬಹುದು. 2023-24ರಲ್ಲಿ ಈ ಯೋಜನೆಗೆ 60,000 ಕೋಟಿ ರೂ.ಗಳನ್ನು ಕೇಂದ್ರ ಮಂಜೂರು ಮಾಡಿತ್ತು. ಅದೇ ರೀತಿಯಾಗಿ ಈ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ಒದಗಿಸುವ ಸಾಧ್ಯತೆ ಇದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ವಿಮೆ ಹೆಚ್ಚಳದ ನಿರೀಕ್ಷೆಯೂ ಇದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ಆರೋಗ್ಯ ವಿಮೆ ಒದಗಿಸಲಾಗುತ್ತಿದೆ.

ಇದನ್ನೂ ಓದಿ:Explainer: ಕೇಂದ್ರ ಬಜೆಟ್​​​​ನ ವಿಶೇಷತೆ ಏನು? ಹಣಕಾಸು ಮಸೂದೆ ಮಹತ್ವ ಹೀಗಿದೆ!

ABOUT THE AUTHOR

...view details