ಕರ್ನಾಟಕ

karnataka

ETV Bharat / bharat

ಖಾಸಗಿ ಆಸ್ಪತ್ರೆಗಳ ದುಬಾರಿ ಕೊರೊನಾ ಚಿಕಿತ್ಸಾ ಶುಲ್ಕ ಇಳಿಸಿದ್ರೆ ಮರಣ ಪ್ರಮಾಣ ಇಳಿಯುತ್ತೆ: ಸಂಸದೀಯ ಸಮಿತಿ

ಸಾಂಕ್ರಾಮಿಕ ಮತ್ತು ಸರ್ಕಾರಿ ಆರೋಗ್ಯ ಸೌಲಭ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಉತ್ತಮ ಸಹಭಾಗಿತ್ವದ ಅಗತ್ಯವನ್ನು ಒತ್ತಿಹೇಳಿದ ವರದಿ, 'ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಥಿರ ಬೆಲೆ ಮಾದರಿ ತರಬಹುದು. ಇದರಿಂದ ಅನೇಕ ಸಾವುಗಳನ್ನು ತಪ್ಪಿಸಿದೆ ಎಂದು ಸಂಸದೀಯ ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

COVID-19
ಕೋವಿಡ್​

By

Published : Nov 21, 2020, 5:16 PM IST

ನವದೆಹಲಿ:ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್​-19 ಪ್ರಕರಣಗಳ ಮಧ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಅಸಮರ್ಪಕ ಹಾಸಿಗೆ ಮತ್ತು ವೈರಸ್​ ಚಿಕಿತ್ಸೆಗೆ ನಿರ್ದಿಷ್ಟ ಮಾರ್ಗಸೂಚಿಗಳ ಅನುಪಸ್ಥಿತಿಯ ಕಾರಣದಿಂದಾಗಿ ಖಾಸಗಿ ಆಸ್ಪತ್ರೆಗಳು ಅತಿಯಾದ ಶುಲ್ಕ ವಿಧಿಸುತ್ತಿವೆ. ಏಕರೂಪದ ಬೆಲೆ ನಿಗದಿ ಪಡಿಸುವುದರಿಂದ ಅನೇಕ ಸಾವು-ನೋವುಗಳನ್ನು ತಪ್ಪಿಸಬಹುದು ಎಂದು ಸಂಸದೀಯ ಸಮಿತಿಯು ತನ್ನ ವರದಿಯಲ್ಲಿ ಪ್ರತಿಪಾದಿಸಿದೆ.

ಆರೋಗ್ಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಮ್ ಗೋಪಾಲ್ ಯಾದವ್ ಅವರ ನೇತೃತ್ವದಲ್ಲಿ 'ಸಾಂಕ್ರಾಮಿಕ ಕೋವಿಡ್ -19 ಮತ್ತು ಅದರ ನಿರ್ವಹಣೆ' ಕುರಿತು ವರದಿ ಸಿದ್ಧಪಡಿಸಿ ಅದನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದೆ.

ಸರ್ಕಾರದ ಕೋವಿಡ್​-19 ಸಾಂಕ್ರಾಮಿಕ ರೋಗ ನಿರ್ವಹಿಸುವ ಬಗೆಗಿನ ಪ್ರಥಮ ಸಂಸದೀಯ ಸಮಿತಿಯ ವರದಿಯಾಗಿದೆ. 1.3 ಶತಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಆರೋಗ್ಯ ವೆಚ್ಚವು 'ತೀರಾ ಕನಿಷ್ಠವಾಗಿದೆ. ಭಾರತೀಯ ಆರೋಗ್ಯ ವಾತಾವರಣದ ವ್ಯವಸ್ಥೆಯ ದುರ್ಬಲತೆಯು ದೊಡ್ಡಮಟ್ಟದಲ್ಲಿದೆ. ಹೀಗಾಗಿಯೇ ಸಾಂಕ್ರಾಮಿಕ ರೋಗದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಿದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಹೂಡಿಕೆ ಹೆಚ್ಚಿಸಲು 2025ರ ನಿಗದಿತ ಸಮಯದ ಒಳಗೆ ಖರ್ಚು ಹೆಚ್ಚಿಸಬೇಕು. ಎರಡು ವರ್ಷಗಳಲ್ಲಿ ಜಿಡಿಪಿಯ ಶೇ 2.5ರಷ್ಟು ಖರ್ಚನ್ನು ರಾಷ್ಟ್ರೀಯ ಆರೋಗ್ಯ ನೀತಿಯ ಗುರಿಗಳನ್ನು ಸಾಧಿಸಲು ಸತತ ಪ್ರಯತ್ನ ಮಾಡಲು ಸಮಿತಿಯು ಸರ್ಕಾರಕ್ಕೆ ಒತ್ತಡ ಪೂರ್ವಕವಾಗಿ ಶಿಫಾರಸು ಮಾಡುತ್ತದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಸಾರ್ವಜನಿಕ ಆರೋಗ್ಯ ವೆಚ್ಚ ಕಡಿಮೆಯಾದರ ನಾಗರಿಕರ ಜೀವನ ಅಪಾಯಕ್ಕೆ ತಳ್ಳಿದಂತೆ ಆಗುತ್ತದೆ ಎಂದು ವರದಿಯಲ್ಲಿ ಎಚ್ಚರಿಸಿದೆ.

ರಾಷ್ಟ್ರೀಯ ಆರೋಗ್ಯ ನೀತಿ 2017- 2017ರಲ್ಲಿ ಕೇವಲ ಶೇ 1.15ರಿಂದ 2025ರ ವೇಳೆಗೆ ಜಿಡಿಪಿಯ ಶೇ 2.5ರಷ್ಟು ಆರೋಗ್ಯ ವೆಚ್ಚದ ಗುರಿ ನಿಗದಿಪಡಿಸಿದೆ. ಮೀಸಲಿಟ್ಟ ಆರೋಗ್ಯ ವ್ಯವಸ್ಥೆಯ ಅನುಪಸ್ಥಿತಿಯಿಂದಾಗಿ ಸಾರ್ವಜನಿಕರಿಗೆ ಆಘಾತ ಮತ್ತು ಸಂಕಟಗಳು ಎದುರಾಗುತ್ತಿವೆ. ಕೋವಿಡ್​ ಮತ್ತು ಕೋವಿಡ್​ ರಹಿತ ರೋಗಿಗಳನ್ನು ನಿಭಾಯಿಸಲು ದೇಶದಲ್ಲಿನ ಸರ್ಕಾರಿ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆ ಸಮರ್ಪಕವಾಗಿಲ್ಲ ಎಂದು ಸಮಿತಿ ಗಮನಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ ಚಿಕಿತ್ಸೆಗೆ ನಿರ್ದಿಷ್ಟ ಮಾರ್ಗಸೂಚಿಗಳ ಅನುಪಸ್ಥಿತಿ ಕಾಡುತ್ತಿದೆ. ಆರೋಗ್ಯ ಸೇವಾ ವಿತರಣೆಯ ವೆಚ್ಚ ಹೆಚ್ಚಾಗಿದೆ. ಇದರ ಪರಿಣಾಮವಾಗಿ ರೋಗಿಗಳಿಗೆ ಅತಿಯಾದ ಶುಲ್ಕ ವಿಧಿಸಲಾಗುತ್ತದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಸಾಂಕ್ರಾಮಿಕ ಮತ್ತು ಸರ್ಕಾರಿ ಆರೋಗ್ಯ ಸೌಲಭ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಉತ್ತಮ ಸಹಭಾಗಿತ್ವದ ಅಗತ್ಯವನ್ನು ಒತ್ತಿಹೇಳಿದ ವರದಿ, 'ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಥಿರ ಬೆಲೆ ಮಾದರಿ ತರಬಹುದು. ಇದರಿಂದ ಅನೇಕ ಸಾವುಗಳನ್ನು ತಪ್ಪಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ABOUT THE AUTHOR

...view details