ನವದೆಹಲಿ:ಮುಂಬರುವ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಸಂಸದೀಯ ಮಂಡಳಿ ಹಾಗು ಚುನಾವಣಾ ಸಮಿತಿ ಎರಡಲ್ಲೂ ಬಿ ಎಸ್ ಯಡಿಯೂರಪ್ಪ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಈ ಮೂಲಕ ಪಕ್ಷದ ಕೇಂದ್ರ ನಾಯಕರಿಂದ ಬಿಎಸ್‌ವೈ ಕಡೆಗಣನೆಗೆ ಒಳಪಟ್ಟಿದ್ದಾರೆ ಎಂಬ ವಿಚಾರ ಸುಳ್ಳಾಗಿದೆ.
ಇದೇ ವೇಳೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರನ್ನು ಕೇಂದ್ರೀಯ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ಚುನಾವಣಾ ಸಮಿತಿಗೆ ಈ ಸಲ ಹೈಕಮಾಂಡ್ ದೇವೇಂದ್ರ ಫಡ್ನವೀಸ್‌ಗೆ ಮಣೆ ಹಾಕಿದೆ.
ಇನ್ನುಳಿದಂತೆ, ಸಂಸದೀಯ ಮಂಡಳಿಯಲ್ಲಿ ಸುಧಾ ಯಾದವ್, ಇಕ್ಬಾಲ್, ಸರ್ಬಾನಂದ ಸೋನೋವಾಲ್, ಕೆ ಲಕ್ಷ್ಮಣ್ ಅವರನ್ನು ಹೊಸ ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಹಾಗು ಜೆ ಪಿ ನಡ್ಡಾ ಮಂಡಳಿಯಲ್ಲಿರುವ ಪ್ರಮುಖರು.