ಕರ್ನಾಟಕ

karnataka

ETV Bharat / bharat

ಡಿಸೆಂಬರ್ 7ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ - ಉಪ ರಾಷ್ಟ್ರಪತಿ ಜಗದೀಪ್ ಧನಕರ್

2022ರ ಸಂಸತ್ತಿನ ಚಳಿಗಾಲದ ಅಧಿವೇಶನವು ಡಿ.7ರಿಂದ ಪ್ರಾರಂಭವಾಗಿ ಡಿ.29ರವರೆಗೆ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್​ ಮಾಡಿದ್ದಾರೆ.

parliament-winter-session-to-begin-on-december-7
ಡಿಸೆಂಬರ್ 7ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ

By

Published : Nov 19, 2022, 9:35 AM IST

ನವದೆಹಲಿ:ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ ಡಿಸೆಂಬರ್ 29 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಒಟ್ಟು 17 ದಿನಗಳ ಕಾಲ ಸಂಸತ್ತಿನ ಕಲಾಪ ನಡೆಯಲಿದೆ.

2022ರ ಸಂಸತ್ತಿನ ಚಳಿಗಾಲದ ಅಧಿವೇಶನವು ಡಿ.7ರಿಂದ ಪ್ರಾರಂಭವಾಗಿ ಡಿ.29 ರವರೆಗೆ ನಡೆಯಲಿದೆ. ಒಟ್ಟು 23 ದಿನಗಳ ಅವಧಿಯಲ್ಲಿ 17 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಮೃತ್ ಕಾಲದ ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳು ಮತ್ತು ರಚನಾತ್ಮಕ ಚರ್ಚೆಗಾಗಿ ಎದುರು ನೋಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್​ ಮಾಡಿದ್ದಾರೆ.

ಇತ್ತೀಚೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸೇರಿ ಹಾಲಿ ಸದಸ್ಯರ ನಿಧನದ ಗೌರವಾರ್ಥ ಅಧಿವೇಶನದ ಮೊದಲ ದಿನವನ್ನು ಮುಂದೂಡುವ ಸಾಧ್ಯತೆ ಇದೆ. ಕೋವಿಡ್ ಸೋಂಕಿನ ಸಂಖ್ಯೆಗಳು ಗಣನೀಯವಾಗಿ ಇಳಿಮುಖವಾಗಿರುವುದರಿಂದ ಮತ್ತು ಲೋಕಸಭೆ ಮತ್ತು ರಾಜ್ಯಸಭಾ ಸಚಿವಾಲಯದ ಹೆಚ್ಚಿನ ಸದಸ್ಯರು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿರುವರಿಂದ ಯಾವುದೇ ಪ್ರಮುಖ ಕೋವಿಡ್ ನಿರ್ಬಂಧಗಳಿಲ್ಲದೆ ಅಧಿವೇಶನವನ್ನು ಕರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯ ಅಧ್ಯಕ್ಷರಾಗಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಅಧಿವೇಶನ ಇದಾಗಿದೆ. ಮುಂಬರುವ ಅಧಿವೇಶನದಲ್ಲಿ ಅಂಗೀಕರಿಸಬೇಕಾದ ಮಸೂದೆಗಳ ಪಟ್ಟಿಯನ್ನು ಸರ್ಕಾರ ಸಿದ್ಧ ಪಡಿಸುತ್ತಿದೆ. ಇತ್ತ, ಪ್ರತಿಪಕ್ಷಗಳು ಪ್ರಸ್ತುತ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯಿಸಲು ಸಿದ್ಧತೆ ನಡೆಸಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಹಳೆ ಪಿಂಚಣಿ ಯೋಜನೆ ಜಾರಿಗೆ ಪಂಜಾಬ್​ ಸಚಿವ ಸಂಪುಟ ಅನುಮೋದನೆ

ABOUT THE AUTHOR

...view details