ಕರ್ನಾಟಕ

karnataka

ETV Bharat / bharat

ಇಂದಿನಿಂದ ವಿಶೇಷ ಅಧಿವೇಶನ: ಹಳೆ ಕಟ್ಟಡದಲ್ಲಿ ಮೊದಲ ದಿನದ ಕಲಾಪ, ನಾಳೆಯಿಂದ ಹೊಸ ಸಂಸತ್‌ ಭವನಕ್ಕೆ ಶಿಫ್ಟ್‌

ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ನಿನ್ನೆ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭಾ ನಾಯಕರ ಸಭೆ ಕರೆದಿತ್ತು. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಅಧಿವೇಶನದಲ್ಲಿ ಪ್ರತಿಪಕ್ಷಗಳು ಒತ್ತಾಯಿಸಲಿವೆ. ಇದರ ಜೊತೆಗೆ ಕೆಲವು ಕುತೂಹಲಕರ ಮತ್ತು ಅಚ್ಚರಿಯ ಸಂಗತಿಗಳನ್ನೂ ನಿರೀಕ್ಷಿಸಲಾಗುತ್ತಿದೆ.

Parliament session set to begin Monday  proceedings to move to new building Tuesday  Parliament session set to begin today  ನೂತನ ಸಂಸತ್ತಿನಲ್ಲಿ ಕಲಾಪಗಳು ಆರಂಭ  ಇಂದಿನಿಂದ ಐದು ದಿನಗಳ ಸಂಸತ್ ಅಧಿವೇಶನ ಆರಂಭ  ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳು  ಇಂದು ತೆರೆ ಬೀಳುವ ನಿರೀಕ್ಷೆ  ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ  ಇಂದಿನಿಂದ ವಿಶೇಷ ಅಧಿವೇಶನ ಆರಂಭ  ಐದು ದಿನಗಳ ಅಧಿವೇಶನ  ಚುನಾವಣಾ ಆಯುಕ್ತರ ನೇಮಕ  ಮಂಗಳವಾರ ಗ್ರೂಪ್ ಫೋಟೋ  ಸಚಿವರಿಗೆ ಸರಕಾರದ ಆದೇಶ  ಸರ್ವಪಕ್ಷ ಸಭೆ  ಹೊಸ ಸಂಸತ್ ಕಟ್ಟಡ
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಹೆಚ್ಚು ಒತ್ತು!?

By PTI

Published : Sep 18, 2023, 8:10 AM IST

ನವದೆಹಲಿ:ಇಂದಿನಿಂದ 5 ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ರಾಜ್ಯಸಭೆಯಲ್ಲಿ 75 ವರ್ಷಗಳ ಸಂಸದೀಯ ಪಯಣ, ಸಾಧನೆ, ಅನುಭವ, ನೆನಪುಗಳು ಮತ್ತು ಕಲಿಕೆಗಳ ಕುರಿತು ಚರ್ಚೆ ನಡೆಯಲಿದೆ.

ಮಂಡನೆಯಾಗಲಿರುವ ಮಸೂದೆಗಳು: ಅಂಚೆ ಕಚೇರಿ ಮಸೂದೆ-2023 ಮತ್ತು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ಎರಡೂ ಮಸೂದೆಗಳನ್ನು ಬಳಿಕ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ವಕೀಲರ ತಿದ್ದುಪಡಿ ಮಸೂದೆ-2023 ಮತ್ತು ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ-2023 ಅನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಈ ಮಸೂದೆಗಳನ್ನು ಆಗಸ್ಟ್ 3 ರಂದು ರಾಜ್ಯಸಭೆ ಅಂಗೀಕರಿಸಿತ್ತು.

ಇಂದಿನ ಕಲಾಪಗಳು ಹಳೆಯ ಸಂಸತ್ ಕಟ್ಟಡದಲ್ಲಿ ನಡೆಯಲಿವೆ. ಸೆ.19ರಂದು (ನಾಳೆ) ನೂತನ ಸಂಸತ್ತಿನಲ್ಲಿ ಕಲಾಪಗಳು ನಿಗದಿಯಾಗಿವೆ. ಹೊಸ ಸಂಸತ್ ಕಟ್ಟಡಕ್ಕೆ ತೆರಳುವಾಗ ಸಂಸತ್ ಸಿಬ್ಬಂದಿ ನೆಹರೂ ಜಾಕೆಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ.

ವಿಶೇಷ ಅಧಿವೇಶನಕ್ಕೂ ಮುನ್ನ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಧಿವೇಶನದಲ್ಲಿ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಒಟ್ಟು 8 ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ ಎಂದು ಹೇಳಿದರು. ಭಾನುವಾರ ಸಂಜೆ ನಡೆದ ಸರ್ವಪಕ್ಷ ಸಭೆಯಲ್ಲಿ ಹಿರಿಯ ನಾಗರಿಕರ ಕಲ್ಯಾಣ ಮಸೂದೆ ಹಾಗೂ ಎಸ್‌ಸಿ/ಎಸ್‌ಟಿ ಆದೇಶಕ್ಕೆ ಸಂಬಂಧಿಸಿದ ಮೂರು ವಿಧೇಯಕಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ ಎಂದು ಸದನದ ನಾಯಕರಿಗೆ ತಿಳಿಸಿರುವುದಾಗಿ ಮಾಹಿತಿ ನೀಡಿದರು.

ಚುನಾವಣಾ ಆಯುಕ್ತರ ನೇಮಕಾತಿ:ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಮಸೂದೆ ಇದಾಗಿದೆ. ಕಳೆದ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು.

ಮಹಿಳಾ ಮೀಸಲಾತಿ ಮಸೂದೆ:ಇತ್ತೀಚಿನ ಜಿ20 ಶೃಂಗಸಭೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಸಾಧನೆಗಳನ್ನು ಶ್ಲಾಘಿಸಿದ್ದಾರೆ. ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿರುವುದು ಮೀಸಲಾತಿ ಮಸೂದೆಯ ಬಗ್ಗೆ ಚರ್ಚೆ ಹೆಚ್ಚಿಸಿದೆ. ಹೀಗಾಗಿ, ಐದು ದಿನಗಳ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ವಿಧೇಯಕ ತರಬೇಕೆಂಬ ವಿವಿಧ ಪಕ್ಷಗಳ ಬೇಡಿಕೆಗೆ ಸರ್ಕಾರದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಹ್ಲಾದ್ ಜೋಶಿ, ಸೂಕ್ತ ಸಮಯದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

ಮಂಗಳವಾರ ಗ್ರೂಪ್ ಫೋಟೋ:ಲೋಕಸಭೆ ಸೆಕ್ರೆಟರಿಯೇಟ್ ಹೊರಡಿಸಿರುವ ಬುಲೆಟಿನ್ ಪ್ರಕಾರ, ಮಂಗಳವಾರ ಬೆಳಗ್ಗೆ 9:30ಕ್ಕೆ ಎಲ್ಲ ಸಂಸದರನ್ನು ಗ್ರೂಪ್ ಫೋಟೋಗೆ ಕರೆಯಲಾಗಿದೆ. ಹಳೆಯ ಕಟ್ಟಡದ ಒಳ ಆವರಣದಲ್ಲಿ ಗುಂಪು ಛಾಯಾಚಿತ್ರಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೊಸ ಸಂಸತ್ ಭವನ ಪ್ರವೇಶಿಸಲು ಸಂಸದರಿಗೆ ಹೊಸ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಸೆ.19ರಂದು ಹೊಸ ಕಟ್ಟಡಕ್ಕೆ ಕೇಟರಿಂಗ್ ಕೂಡ ಸ್ಥಳಾಂತರಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವರಿಗೆ ಸರಕಾರದ ಆದೇಶವೇನು?:ಸರ್ಕಾರದ ಪರವಾಗಿ ಎಲ್ಲಾ ಸಂಪುಟ ಸಚಿವರು ಸೇರಿದಂತೆ ಇತರೆ ಸಚಿವರು ವಿಶೇಷ ಅಧಿವೇಶನದ ಐದು ದಿನಗಳ ಕಲಾಪದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ. ಆದೇಶದಂತೆ, ಸಚಿವರಾಗಿರುವ ಲೋಕಸಭೆ ಸಂಸದರು ಇಡೀ ಕಲಾಪದಲ್ಲಿ ರಾಜ್ಯಸಭೆಯಲ್ಲಿ ಹಾಜರಿರಬೇಕು ಎಂದು ತಿಳಿಸಲಾಗಿದೆ.

ನಿನ್ನೆ ನಡೆದ ಸರ್ವಪಕ್ಷ ಸಭೆ:ಭಾನುವಾರ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿತ್ತು. ಈ ಸಭೆಯಲ್ಲಿ ಹಲವು ಪ್ರತಿಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಡಿಎಂಕೆ ನಾಯಕ ವೈಕೋ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ವಿ.ಶಿವದಾಸನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ವಿಪಕ್ಷಗಳು ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಅವರ ಅಮಾನತು ಆದೇಶ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದವು. ಚುನಾವಣಾ ಆಯೋಗದ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವಂತೆ ವಿಪಕ್ಷಗಳು ಸಲಹೆ ನೀಡಿದವು. ಇದಲ್ಲದೇ ಜಾತಿ ಗಣತಿ, ಅದಾನಿ ಪ್ರಕರಣ, ಸಿಎಜಿ ವರದಿ, ಮಣಿಪುರ, ಮೇವಾತ್ ಸೇರಿದಂತೆ ನಾನಾ ವಿಷಯಗಳ ಕುರಿತು ಸದನದಲ್ಲಿ ಚರ್ಚೆಗೆ ಆಗ್ರಹ ವ್ಯಕ್ತವಾಯಿತು.

ಹೊಸ ಸಂಸತ್ ಕಟ್ಟಡ: ಪ್ರಧಾನಿ ನರೇಂದ್ರ ಮೋದಿ 10 ಡಿಸೆಂಬರ್ 2020ರಂದು ಹೊಸ ಸಂಸತ್ತಿನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. 28 ಮೇ 2023 ರಂದು ಭವ್ಯ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಿದ್ದರು. ನೂತನ ಸಂಸತ್ ಕಟ್ಟಡದ ಕೆಲಸವನ್ನು 29 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ತ್ರಿಕೋನಾಕಾರದಲ್ಲಿ ಕಟ್ಟಡದ ವಿನ್ಯಾಸವಿದೆ. 64,500 ಚದರ ಮೀಟರ್‌ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. 862 ಕೋಟಿ ರೂಪಾಯಿ ವ್ಯಯಿಸಲಾಗಿದೆ.

ಹಳೆಯ ಸಂಸತ್ ಭವನವು ಲೋಕಸಭೆಯಲ್ಲಿ 545 ಮತ್ತು ರಾಜ್ಯಸಭೆಯಲ್ಲಿ 245 ಸಂಸದರಿಗೆ ಆಸನ ವ್ಯವಸ್ಥೆ ಹೊಂದಿದೆ. ಆದರೆ, ಹೊಸ ಕಟ್ಟಡದಲ್ಲಿ 888 ಸಂಸದರು ಲೋಕಸಭೆಯಲ್ಲಿ ಕುಳಿತುಕೊಳ್ಳಬಹುದು. ಜಂಟಿ ಅಧಿವೇಶನದ ಸಂದರ್ಭದಲ್ಲಿ 1,272 ಸಂಸದರು ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. 384 ಸಂಸದರು ಸುಲಭವಾಗಿ ರಾಜ್ಯಸಭಾ ಕೊಠಡಿಯಲ್ಲಿ ಕುಳಿತುಕೊಳ್ಳಬಹುದು. ಹೊಸ ಸಂಸತ್ತಿನಲ್ಲಿ ಲೋಕಸಭೆಯ ಚೇಂಬರ್ ಅನ್ನು ರಾಷ್ಟ್ರೀಯ ಪಕ್ಷಿ ನವಿಲು ಮತ್ತು ರಾಜ್ಯಸಭಾ ಚೇಂಬರ್ ಅನ್ನು ರಾಷ್ಟ್ರೀಯ ಹೂವು ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ:ಪಂಚ ರಾಜ್ಯ ಚುನಾವಣೆ ಬಳಿಕ ಲೋಕಸಭೆಗೆ ಇಂಡಿಯಾ ಕೂಟದ ಸೀಟು ಹಂಚಿಕೆಗೆ ಕಾಂಗ್ರೆಸ್​ ಒಲವು

ABOUT THE AUTHOR

...view details