ನವದೆಹಲಿ: ಇಂದಿನಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಕೇಂದ್ರ ಸರ್ಕಾರ ತಯಾರಿ ನಡೆಸಿದ್ದು, ವಿವಿಧ ವಿಚಾರಗಳನ್ನಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಯಾರಿ ನಡೆಸಿವೆ. ಪ್ರಸಕ್ತ ಅಧಿವೇಶನವು ಆಗಸ್ಟ್ 12 ರವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಕಂಟೋನ್ಮೆಂಟ್ ಮಸೂದೆ, ಮಲ್ಟಿ ಸ್ಟೇಟ್ ಕೋಅಪರೇಟಿವ್ ಸೊಸೈಟೀಸ್ ಮಸೂದೆ, ತಮಿಳುನಾಡು ಮತ್ತು ಛತ್ತೀಸ್‌ಘಡದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪರಿಷ್ಕೃತ ಪಟ್ಟಿಗೆ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 24 ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲಿದೆ. ಈ ಮಸೂದೆಗಳ ಹೊರತಾಗಿ ಈಗಾಗಲೇ ಉಭಯ ಸದನಗಳಲ್ಲಿ ಬಾಕಿ ಉಳಿದಿರುವ ಇತರೆ 8 ಮಸೂದೆಗಳು ಅನುಮೋದನೆಗಾಗಿ ಕಾದು ಕುಳಿತಿದ್ದು, ಸಂಸತ್ತಿನಲ್ಲಿ ಮಂಡನೆಯಾಗಲಿವೆ.