ಕರ್ನಾಟಕ

karnataka

ETV Bharat / bharat

ಮಣಿಪುರದ 'ಕೋಕ್ಯೆಟ್' ಪೇಟ ಧರಿಸಲಿರುವ ಸಂಸತ್ ಭವನದ ಮಾರ್ಷಲ್‌ಗಳು - ಲೋಕಸಭೆ ಅಧಿವೇಶನ

ಲೋಕಸಭೆ ಮತ್ತು ರಾಜ್ಯಸಭೆಗಳ ಮಾರ್ಷಲ್‌ಗಳ ವಸ್ತ್ರವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದ್ದು, ಮಣಿಪುರದ ಪ್ರಸಿದ್ಧ 'ಕೋಕ್ಯೆಟ್' ಪೇಟ ಧರಿಸಲಿದ್ದಾರೆ.

parliament
ಸಂಸತ್ ಭವನ

By ETV Bharat Karnataka Team

Published : Sep 14, 2023, 2:17 PM IST

ತೇಜ್‌ಪುರ (ಅಸ್ಸೋಂ) : ದೇಶದ ಹೆಮ್ಮೆಯ ಪ್ರತೀಕವಾದ ಮತ್ತು ಸಾಂಸ್ಕೃತಿಕ ಪ್ರಸಿದ್ಧಿ ಹೊಂದಿರುವ ಮಣಿಪುರದ ಮೈತೇಯಿ ಜನರ ಸರ್ವೋತ್ಕೃಷ್ಟ ಪೇಟವಾದ 'ಕೋಕ್ಯೆಟ್' ಸಂಸತ್ತಿನಲ್ಲಿ ವಿಶೇಷ ಸ್ಥಾನ ಪಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಸಂಸತ್ತಿನ ಉಭಯ ಸದನಗಳ ಮಾರ್ಷಲ್‌ಗಳು ಇನ್ನುಮುಂದೆ ಈ ಪೇಟ ಧರಿಸಲಿದ್ದಾರೆ.

ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ವಿಶೇಷ ಅಧಿವೇಶನದಲ್ಲಿ ಸಂಸತ್ ಭವನದ ನೌಕರರು ಹೊಸ ಸಮವಸ್ತ್ರವನ್ನು ಧರಿಸುತ್ತಾರೆ ಎಂದು ಸರ್ಕಾರ ಈಗಾಗಲೇ ಅಧಿಸೂಚನೆಯಲ್ಲಿ ತಿಳಿಸಿದೆ. ಮಾರ್ಷಲ್‌ಗಳು, ಭದ್ರತಾ ಸಿಬ್ಬಂದಿ, ಅಧಿಕಾರಿಗಳು, ಚೇಂಬರ್ ಅಟೆಂಡರ್‌ಗಳು ಮತ್ತು ಚಾಲಕರಿಗೆ ನೂತನ ಸಮವಸ್ತ್ರ ನೀಡಿದ್ದು ಹೊಸ ಸಂಸತ್ ಭವನ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ ಅವರು ಈ ಉಡುಪು ಧರಿಸಬೇಕು ಎಂದು ತಿಳಿಸಲಾಗಿದೆ.

ಉಭಯ ಸದನಗಳ ಮಾರ್ಷಲ್‌ಗಳು ಮೊದಲು ಧರಿಸುತ್ತಿದ್ದ ಉಡುಪಿಗಿಂತ ಸ್ಪಲ್ಪ ವಿಭಿನ್ನವಾಗಿ ಕಾಣಲಿದ್ದಾರೆ. ಅವರ ಶರ್ಟ್‌ಗಳು ಕಡು ಗುಲಾಬಿ ಬಣ್ಣದಲ್ಲಿರಲಿದ್ದು, ಅದರ ಮೇಲೆ ಕಮಲದ ಹೂವುಗಳು ಇದೆ. ಖಾಕಿ ಬಣ್ಣದ ಲೂಸ್ ಪ್ಯಾಂಟ್‌, ಮಣಿಪುರಿ ಪೇಟ ಧರಿಸಲಿದ್ದಾರೆ. ಭದ್ರತಾ ಸಿಬ್ಬಂದಿ ನೀಲಿ ಸಫಾರಿ ಸೂಟ್‌ಗಳ ಬದಲಿಗೆ ಸೈನಿಕರು ಧರಿಸುವ ಬಟ್ಟೆಯ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ, ಮಹಿಳಾ ಅಧಿಕಾರಿಗಳಿಗೆ ಚಳಿಗಾಲಕ್ಕೆ ಅನುಕೂಲವಾಗುವಂತೆ ಜಾಕೆಟ್‌ಗಳೊಂದಿಗೆ ಗಾಢ ಬಣ್ಣದ ಸೀರೆಗಳನ್ನು ನೀಡಲಾಗಿದೆ.

ಇನ್ನೊಂದೆಡೆ, ಮಾರ್ಷಲ್‌ಗಳ ಬಟ್ಟೆಯ ಮೇಲೆ ಕಮಲದ ಹೂವು ಮುದ್ರಿಸಿರುವುದರಿಂದ ವಿವಾದ ಉಂಟಾಗಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಚುನಾವಣಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದೆ. ಕೆಲವು ಅಜೆಂಡಾಗಳ ಅಡಿಯಲ್ಲಿ ಸರ್ಕಾರವು ಉಡುಗೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಉಡುಗೆ ವಿನ್ಯಾಸಗಳಲ್ಲಿ ಕಮಲದ ಹೂವನ್ನು ಏಕೆ ಬಳಸಲಾಗಿದೆ?. ಅಲ್ಲಿ ನವಿಲು ಅಥವಾ ಹುಲಿಯನ್ನು ಏಕೆ ಬಳಸಿಲ್ಲ?. ಅದು ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆ ಅಲ್ಲವೇ ಎಂದು ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳು ಆಕ್ರೋಶ ಹೊರಹಾಕಿವೆ.

ಇದನ್ನೂ ಓದಿ :ವಿಶೇಷ ಅಧಿವೇಶನ : ಮೊದಲ ದಿನ ಸಂಸತ್ತಿನ 75 ವರ್ಷಗಳ ಪ್ರಯಾಣದ ಕುರಿತು ಚರ್ಚೆ

ಕಳೆದ ಮೇ 28 ರಂದು ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಅಂದಿನಿಂದಲೇ ಸಿಬ್ಬಂದಿ ಹೊಸ ಡ್ರೆಸ್ ಧರಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ವಿಳಂಬವಾಗಿತ್ತು. ಇದೀಗ ಸೆಪ್ಟೆಂಬರ್ 18 ರಿಂದ ಐದು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಅಧಿವೇಶನದ ಮೊದಲ ದಿನ ಉಭಯ ಸದನಗಳ ಕಲಾಪಗಳು ಹಳೆಯ ಸಂಸತ್ತಿನ ಭವನದಲ್ಲೇ ಮೊದಲಿನಂತೆ ನಡೆಯಲಿವೆ. ಹೊಸ ಕಟ್ಟಡದಲ್ಲಿ ಎರಡನೇ ದಿನದಿಂದ ಕಲಾಪ ಪ್ರಾರಂಭವಾಗುತ್ತದೆ. ಅಂದರೆ, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸಿದ ಬಳಿಕ ಎರಡು ಸದನಗಳ ಕಲಾಪಗಳನ್ನು ಹೊಸ ಕಟ್ಟಡದಲ್ಲಿ ನಡೆಸಲಾಗುತ್ತದೆ.

ಇದನ್ನೂ ಓದಿ :ಲೋಕಸಭೆ ಅಧಿವೇಶನದ ನಂತರ ರಾಜ್ಯಾಧ್ಯಕ್ಷ ಪ್ರತಿಪಕ್ಷ ನಾಯಕರ ಆಯ್ಕೆ: ಮಾಜಿ ಸಿಎಂ ಬೊಮ್ಮಾಯಿ

ABOUT THE AUTHOR

...view details