ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ.. ಹೆತ್ತ ಮಗಳನ್ನೇ ಕೊಂದ ಪೋಷಕರು - ಮಗಳನ್ನೇ ಕೊಂದ ಪೋಷಕರು

ತೆಲಂಗಾಣದಲ್ಲಿ ಬೇರೆ ಸಮುದಾಯದ ಯುವಕನೊಬ್ಬನನ್ನು ಮದುವೆ ಮಾಡಿಕೊಂಡಿದ್ದಕ್ಕಾಗಿ ಹೆತ್ತ ಮಗಳನ್ನೇ ಪೋಷಕರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

HONOR KILLING IN TELANGANA
HONOR KILLING IN TELANGANA

By

Published : May 27, 2022, 6:59 PM IST

ಆದಿಲಾಬಾದ್​(ತೆಲಂಗಾಣ): ಕಳೆದ ಕೆಲ ದಿನಗಳ ಹಿಂದೆ ತೆಲಂಗಾಣದ ಸರೂರ್​​ನಗರದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಹೆತ್ತ ಮಗಳನ್ನೇ ಪೋಷಕರು ಭೀಕರವಾಗಿ ಕೊಲೆ ಮಾಡಿದ್ದಾರೆ. ತೆಲಂಗಾಣದ ಆದಿಲಾಬಾದ್​​ ಜಿಲ್ಲೆಯ ನಾರ್ನೂರ್​​ ವಲಯದ ನಾಗಕೊಂಡದಲ್ಲಿ ಈ ಪ್ರಕರಣ ನಡೆದಿದ್ದು, ಬೇರೆ ಸಮುದಾಯದ ವ್ಯಕ್ತಿಯನ್ನ ಮದುವೆಯಾಗಿದ್ದಕ್ಕಾಗಿ ಮಗಳನ್ನೇ ಕೊಲೆ ಮಾಡಿದ್ದಾರೆ.

ನಾಗಲಕೊಂಡ ಮೂಲದ ಯುವತಿ ಬೇರೆ ಸಮುದಾಯದ ವ್ಯಕ್ತಿಯನ್ನ ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಕಳೆದ 45 ದಿನಗಳ ಹಿಂದೆ ಮನೆ ತೊರೆದು ಆತನೊಂದಿಗೆ ಮದುವೆ ಮಾಡಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ಆರಂಭ ಮಾಡಿದ್ದ ಪೊಲೀಸರು ಪೋನ್ ಸಿಗ್ನಲ್​ ಮೂಲಕ ಮಹಾರಾಷ್ಟ್ರದಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ:ನದಿಗೆ ಉರುಳಿ ಬಿದ್ದ ಸೇನಾ ವಾಹನ: 7 ಯೋಧರು ಹುತಾತ್ಮ, 19 ಸೈನಿಕರಿಗೆ ಗಾಯ

ತದನಂತರ ಮಹಾರಾಷ್ಟ್ರದಿಂದ ಆಕೆಯನ್ನ ಕರೆತಂದು ಪೋಷಕರಿಗೆ ಒಪ್ಪಿಸಿದ್ದರು. ಜೊತೆಗೆ ಮದುವೆಯಾದ ವ್ಯಕ್ತಿಯನ್ನ ರಿಮಾಂಡ್​ ರೂಮ್​ಗೆ ಕಳುಹಿಸಿದ್ದರು. ಇದರ ಮಧ್ಯೆ ತಮ್ಮ ಮಗಳು ಬೇರೆ ಧರ್ಮದ ವ್ಯಕ್ತಿಯನ್ನ ಮದುವೆಯಾಗಿ, ಅವಮಾನ ಮಾಡಿದ್ದಾಳೆ ಎಂದು ಆಕ್ರೋಶಗೊಂಡಿದ್ದರು.

ಜೊತೆಗೆ ಮಗಳೊಂದಿಗೆ ವಾಗ್ವಾದ ನಡೆಸಿದ್ದರು. ಇಂದು ಬೆಳಗ್ಗೆ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ, ಪ್ರಕರಣ ದಾಖಲು ಮಾಡಿಕೊಂಡಿದ್ದು, ಮೃತದೇಹವನ್ನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಇದರ ಜೊತೆಗೆ ಆಕೆಯ ಪೋಷಕರ ಬಂಧನ ಮಾಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದರಿಂದ ಆತನನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದು ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲೂ ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅಂತಹ ಘಟನೆ ನಡೆದಿದೆ.

ABOUT THE AUTHOR

...view details