ಜೈಪುರ: ಟೋಕಿಯೋ ಪ್ಯಾರಾಲಿಂಪಿಕ್ಸ್ನ ಬ್ಯಾಡ್ಮಿಂಟನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಕೃಷ್ಣ ನಗರ್ ಆರಂಭದಲ್ಲಿ ಕ್ರಿಕೆಟಿಗನಾಗಲು ಬಯಸಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ತನ್ನ ಎತ್ತರದ ಬಗ್ಗೆ ಗಮನ ಹರಿಸಿ ಬಳಿಕ ಬ್ಯಾಡ್ಮಿಂಟನ್ ಕಡೆ ಮುಖ ಮಾಡಿರುವುದಾಗಿ ಹೇಳಿದ್ದಾರೆ.
ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಕೃಷ್ಣ ನಗರ್ ಬಾಲ್ಯದ ಕನಸು ಏನು ಗೊತ್ತಾ?
ಟೋಕಿಯೊ ಪ್ಯಾರಾಲಿಂಪಿಕ್ಸ್ನ ಬ್ಯಾಡ್ಮಿಂಟನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಕೃಷ್ಣ ನಗರ್ ಕ್ರಿಕೆಟಿಗನಾಗಲು ಬಯಸಿದ್ದರಂತೆ. ಬಳಿಕ ಎತ್ತರ ಕಡಿಮೆ ಇದ್ದ ಕಾರಣ ಬ್ಯಾಡ್ಮಿಂಟನ್ ಕಡೆ ಮುಖ ಮಾಡಿದೆ ಎಂದು ಹೇಳಿದ್ದಾರೆ.
ಸ್ನೇಹಿತರು, ಕುಟುಂಬದವರು ನನ್ನನ್ನು ಬೆಂಬಲಿಸಿದರು. ಅವರ ಬೆಂಬಲವೇ ನನ್ನ ಈ ಬೆಳವಣಿಗೆಗೆ ಸ್ಫೂರ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ. ಇನ್ನು ಹಾರ್ಮೋನ್ ಕೊರತೆಯಿಂದಾಗಿ ಕೃಷ್ಣ ಅವರ ಎತ್ತರ ಕೇವಲ 4.2 ಇಂಚು ಇದೆ ಎಂದು ಅವರ ತಂದೆ ಹೇಳಿದ್ದಾರೆ. ಆದರೆ, ಆ ಬಗ್ಗೆ ಕುಟುಂಬವಾಗಲಿ, ಕೃಷ್ಣನಾಗಲಿ ನಿರಾಸೆಗೊಂಡಿಲ್ಲ. ಬದಲಾಗಿ ಮುಂದುವರೆಯಲು ಪ್ರೇರೇಪಣೆ ನೀಡಿದೆವು ಎಂದು ಹೇಳಿದರು.
ಕೃಷ್ಣ ಅಂತಿಮವಾಗಿ ಬ್ಯಾಡ್ಮಿಂಟನ್‌ನಲ್ಲಿ ಶಾರ್ಟ್ ಲೆಂಗ್ತ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. "ನಾನು ಪ್ಯಾರಾಲಿಂಪಿಕ್ಸ್‌ನಲ್ಲಿ ನನ್ನ ಅಂತಿಮ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದೆ. ಚಿನ್ನದ ಪದಕ ಗೆದ್ದ ನಂತರ ನನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪಂದ್ಯದ ನಂತರ, ಪ್ರಧಾನಿ ನರೇಂದ್ರ ಮೋದಿ ನನಗೆ ದೂರವಾಣಿ ಕರೆ ಮೂಲಕ ಅಭಿನಂದಿಸಿದರು. ಇದು ನನಗೆ ಹೆಮ್ಮೆ ತಂದಿದೆ" ಎಂದು ಕೃಷ್ಣ ನಗರ್ ಹೇಳಿದ್ದಾರೆ.