ಕೋಟಾ:ರಾಜಸ್ಥಾನದ ಕೋಟಾ ಮಹಾವೀರ ನಗರ ವ್ಯಾಪ್ತಿಯಲ್ಲಿ ಚಿರತೆಯೂ ಇಬ್ಬರು ವೃದ್ಧರ ಮೇಲೆ ದಾಳಿ ಮಾಡಿ ನಂತರ ಇನ್ನೊಂದು ಮನೆಗೆ ಹೋಗಿದ್ದ ಚಿರತೆ ಅಲ್ಲಿನ ವಸತಿ ಗೃಹದಲ್ಲಿ ಸಿಲುಕಿಕೊಂಡಿರುವ ಘಟನೆ ಶನಿವಾರ ಬೆಳಗ್ಗೆ ಜರುಗಿದೆ.
ಚಿರತೆ ದಾಳಿಗೆ ಮಹಾವೀರ ನಗರದ ನಿವಾಸಿಗಳಾದ ಹರಿಶಂಕರ ಮೀನಾ(63), ರಾಮ್ ವಿಲಾಸ್ ಮೀನಾ ಅವರು ತೀವ್ರ ಗಾಯಗೊಂಡವರು. ಗಾಯಾಳುಗಳನ್ನು ಚಿಕಿತ್ಸೆಗೆ ಸಮೀಪದ ವೈದ್ಯಕೀಯ ಕಾಲೇಜಿನ ಹೊಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವ್ಯಕ್ತಿಗಳನ್ನು ಗಾಯಗೊಳಿಸಿದ ಚಿರತೆ ಮತ್ತೆ ಹಲವಾರು ಮನೆಗಳಿಗೆ ನುಗ್ಗಿದೆ. ಬಳಿಕ ಚಿರತೆಯೂ ಒಂದು ವಸತಿ ಗೃಹದಲ್ಲಿ ಬಂಧನಕ್ಕೊಳಗಾಗಿದೆ. ಆ ವೇಳೆ, ಸ್ಥಳೀಯರು ಚಿರತೆ ಸೆರೆ ಹಿಡಿಯುವಂತೆ ವನ್ಯಜೀವಿ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.