ಎರ್ನಾಕುಲಂ(ಕೇರಳ):ಪಂಥೀರಂಕಾವು ಯುಎಪಿಎ ಪ್ರಕರಣದ ಆರೋಪಿ ತಹಾ ಫಜಲ್ ಕೊಚ್ಚಿಯ ಎನ್‌ಐಎ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಪಂಥೀರಂಕಾವು ಯುಎಪಿಎ ಪ್ರಕರಣ ; ತಹಾ ಫಜಲ್ ನ್ಯಾಯಾಲಯಕ್ಕೆ ಶರಣು - Kochi NIA court
ಮಂಚಕಲ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಮಾವೋವಾದಿಗಳಿಂದ ಪಡೆದ ಪುಸ್ತಕವು ತಾಹಾ ಫಜಲ್ ಮನೆಯಿಂದ ಪಡೆದ ಪುಸ್ತಕದಂತೆಯೇ ಇತ್ತು. ಹಾಗಾಗಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು..
![ಪಂಥೀರಂಕಾವು ಯುಎಪಿಎ ಪ್ರಕರಣ ; ತಹಾ ಫಜಲ್ ನ್ಯಾಯಾಲಯಕ್ಕೆ ಶರಣು thaha](https://etvbharatimages.akamaized.net/etvbharat/prod-images/768-512-10123930-thumbnail-3x2-ind.jpg)
ತಹಾ ಫಜಲ್
ಕೇರಳ ಹೈಕೋರ್ಟ್ ಸೋಮವಾರ ಅವರಿಗೆ ನೀಡಿದ್ದ ಜಾಮೀನು ರದ್ದುಪಡಿಸಿ ಕೂಡಲೇ ಶರಣಾಗುವಂತೆ ನಿರ್ದೇಶನ ನೀಡಿದೆ. ಮಾವೋವಾದಿ ಸಂಪರ್ಕ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಕಾಯ್ದೆ ಯುಎಪಿಎ ಅಡಿಯಲ್ಲಿ ಎನ್ಐಎ ದಾಖಲಿಸಿದ ಎರಡನೇ ಪ್ರಕರಣ ಇದು.
ಮಂಚಕಲ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಮಾವೋವಾದಿಗಳಿಂದ ಪಡೆದ ಪುಸ್ತಕವು ತಾಹಾ ಮನೆಯಿಂದ ಪಡೆದ ಪುಸ್ತಕದಂತೆಯೇ ಇತ್ತು. ಇದು ಅವರ ರಹಸ್ಯ ಸಭೆ ನಡೆದ ಕುರಿತಾದ ಪುಸ್ತಕವಾಗಿದ್ದು, ಅದನ್ನು ವಶಪಡಿಸಿಕೊಂಡು ತಹಾ ಫಜಲ್ನನ್ನು ಬಂಧಿಸಲಾಗಿತ್ತು.