ಪನ್ನಾ (ಮಧ್ಯಪ್ರದೇಶ):ಇಲ್ಲಿನ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಅಂತ್ಯದ ಹಿರಿಯ ವಯಸ್ಸಿನ ಆನೆ ವತ್ಸಲಾ ಅನಾರೋಗ್ಯದಿಂದ ಬಳಲುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ವತ್ಸಲಾಳ ಪ್ರಸ್ತುತ ವಯಸ್ಸು 100 ವರ್ಷಕ್ಕಿಂತ ಹೆಚ್ಚು. ವತ್ಸಲಾಳನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಆನೆ ಎಂದು ನೋಂದಾಯಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ.
ವತ್ಸಲಾ ಆನೆಯನ್ನು 1971 ರಲ್ಲಿ ಕೇರಳದ ಕಾಡೊಂದರಿಂದ ಹೋಶಂಗಾಬಾದ್‌ಗೆ ಕರೆತರಲಾಯಿತು. ವತ್ಸಲಾಳನ್ನು ಇಲ್ಲಿಗೆ ಕರೆತಂದಾಗ ಅದಕ್ಕೆ 50 ವರ್ಷ ವಯಸ್ಸಾಗಿತ್ತು.
100 ವರ್ಷ ಮೀರಿದ ವಯಸ್ಸು, ದೃಷ್ಟಿ ಕಳೆದುಕೊಂಡ ವತ್ಸಲಾ :
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಆನೆಗಳ ಸರಾಸರಿ ಜೀವಿತಾವಧಿ 65 ರಿಂದ 70 ವರ್ಷಗಳು. ಹೋಶಂಗಾಬಾದ್‌ಗೆ ಬರುವ ಮೊದಲು ವತ್ಸಲಾ ಬೆಳೆದದ್ದು ಕೇರಳದ ನಿಲಂಬೂರ್ ಅರಣ್ಯದಲ್ಲಿ. ತನ್ನ ಜೀವನದ 50 ವರ್ಷಗಳನ್ನು ವತ್ಸಲಾ ನಿಲಂಬೂರ್ನಲ್ಲಿ ಕಳೆದಿದ್ದಾಳೆ. ನಂತರ ಅವಳನ್ನು 1971 ರಲ್ಲಿ ಹೋಶಂಗಾಬಾದ್‌ಗೆ ಕರೆತರಲಾಯಿತು. 2021 ಕ್ಕೆ ವತ್ಸಲಾಗೆ 100 ವರ್ಷ ವಯಸ್ಸಾಗಿದೆ. ಈಗ ವೃದ್ಧಾಪ್ಯದಿಂದಾಗಿ, ಅವಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾಳೆ. ಈಗಾಗಲೇ ದೃಷ್ಟಿ ಕಳೆದುಕೊಂಡಿದ್ದಾಳೆ ಮತ್ತು ಆಹಾರವನ್ನೂ ಸರಿಯಾಗಿ ಸೇವಿಸುತ್ತಿಲ್ಲ.
ವತ್ಸಲಾಳನ್ನು 1993 ರಲ್ಲಿ ಪನ್ನಾಗೆ ಕರೆತಂದರು :