ಪಂಜಾಬ್: ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ನೇತೃತ್ವದ 21 ಸದಸ್ಯರ ನಿಯೋಗ ಇಂದು ಕರ್ತಾರ್‌ಪುರ ಕಾರಿಡಾರ್ ಮೂಲಕ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ (Kartarpur Sahib Gurdwara) ತೆರಳಿದೆ.
ಬಿಜೆಪಿ ನಿಯೋಗವು ಕರ್ತಾರ್‌ಪುರ ಸಾಹಿಬ್ ಗುರುದ್ವಾರದಲ್ಲಿ ನಮನ ಸಲ್ಲಿಸಲಿದೆ ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಮುಖ್ಯ ಚೆಕ್ಪೋಸ್ಟ್ ಬಳಿ ಮಾಧ್ಯಮದವರಿಗೆ ತಿಳಿಸಿದರು. ಪ್ರಾರ್ಥನೆಯನ್ನು ಗುರುನಾನಕ್ ದೇವ್ ಅವರು ಸ್ವೀಕರಿಸಿದ್ದಾರೆ ಅಂತ ನಂಬಿದ್ದೇವೆ ಎಂದರು. ಕರ್ತಾರ್‌ಪುರ ಕಾರಿಡಾರ್ ಅನ್ನು ಮತ್ತೆ ತೆರೆದಿರುವುದಕ್ಕೆ ಮೋದಿ ಸರ್ಕಾರಕ್ಕೆ ಧನ್ಯವಾದ ಸಮರ್ಪಿಸಿದರು.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲದಿಂದ ಸಿಖ್ಖರ ಪವಿತ್ರ ಸ್ಥಳವಾದ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ಗೆ (Gurdwara Darbar Sahib in Pakistan)ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಸಾಹಿಬ್ ಕಾರಿಡಾರ್(Kartarpur corridor reopen) ಬುಧವಾರದಿಂದ ಪುನಾರಂಭವಾಗಿದೆ. ಕೋವಿಡ್ ಹಿನ್ನೆಲೆ, 2020ರ ಮಾರ್ಚ್ನಿಂದ ಭಾರತದ ಯಾತ್ರಾರ್ಥಿಗಳಿಗೆ ಅಲ್ಲಿಗೆ ತೆರಳಲು ಅವಕಾಶ ಇರಲಿಲ್ಲ. ಹಲವು ತಿಂಗಳ ಬಳಿಕ ನವೆಂಬರ್ 17ರಿಂದ ಅವಕಾಶ ಕಲ್ಪಿಸಿದ್ದು, ಬಿಜೆಪಿ 21 ಸದಸ್ಯರ ನಿಯೋಗ ಇಂದು ತೆರಳಿದೆ. ಈ ಪವಿತ್ರ ಸ್ಥಳಕ್ಕೆ ರಾಜಕೀಯ ನಿಯೋಗ ತೆರಳಿದ್ದು ಇದೇ ಮೊದಲು ಎನ್ನಲಾಗ್ತಿದೆ.