ಭುವನೇಶ್ವರ(ಒಡಿಶಾ): ಅಪರಾಧ ವಿಭಾಗದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕಾರ್ಯಾಚರಣೆ ನಡೆಸಿ ಪ್ಯಾಂಗೋಲಿನ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಒಡಿಶಾದ ರಾಜಧಾನಿ ಭುವನೇಶ್ವರದ ಛಕ್ನಲ್ಲಿರುವ ಕಳಿಂಗ ಸ್ಟುಡಿಯೋ ಸಮೀಪದಲ್ಲಿ ನಡೆದಿದೆ.
ಕಾರ್ಯಾಚರಣೆಯಲ್ಲಿ ಒಂದು ಜೀವಂತ ಪ್ಯಾಂಗೋಲಿನ್ ಅನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದು, ಬಂಧಿತ ಆರೋಪಿಗಳನ್ನು ಕಟಕ್ ಬಳಿಯ ಬಾದಂಬ ಪ್ರದೇಶದ ಚಿತ್ರಸೇನ್ ಸಾಹೂ, ಭುವನೇಶ್ವರದ ಪತ್ರಪದ ಪ್ರದೇಶದ ಖಗೇಶ್ವರ ಸಾಹೂ ಮತ್ತು ಗಂಜಾಂ ಬಳಿಯ ಕಂಸಮರಿ ಪ್ರದೇಶದ ಭಾಗೀರಥಿ ಬೆಹೆರಾ ಎಂದು ಗುರ್ತಿಸಲಾಗಿದೆ.