ಕಟಕ್ (ಒಡಿಶಾ):ಕೆಲವು ದಿನಗಳ ಹಿಂದೆ ಒಡಿಶಾದ ಕಟಕ್‌ನ ಅಥಾಗಡ್ ಅರಣ್ಯ ವಿಭಾಗದ ತಂಡವು ಕಳ್ಳಸಾಗಾಣಿಕೆದಾರರಿಂದ ರಕ್ಷಿಸಿದ ಚಿಪ್ಪು ಹಂದಿಯನ್ನು ಇಂದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಚಿಪ್ಪು ಹಂದಿ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಳೆದ ಒಂದು ವರ್ಷದಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಥಾಗಡ್ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಸಾಸ್ಮಿತಾ ಲೆಂಕಾ ಮಾಹಿತಿ ನೀಡಿದ್ದಾರೆ.